ಚಂಪಕ ಸರಸು’ ಜೀರ್ಣೋದ್ಧಾರಕ್ಕೆ ಮುಂದಾದ ನಟ ಯಶ್, ಏನೇನು ಅಭಿವೃದ್ಧಿ ಕಾರ್ಯಗಳು ಇಲ್ಲಿ ನಡೆಯಲಿವೆ?

ಸುದ್ದಿ ಕಣಜ.ಕಾಂ | TALUK | HISTORICAL PLACE
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನಲ್ಲಿರುವ ಇತಿಹಾಸ ಪ್ರಸಿದ್ಧ ತಾಣವೊಂದ‌ರ ಪುನರುಜ್ಜೀವನಕ್ಕೆ ಚಿತ್ರ ನಟ, ರಾಕಿಂಗ್ ಸ್ಟಾರ್ ಯಶ್ ಮುಂದಾಗಿದ್ದಾರೆ.

ಸಾಗರ ತಾಲೂಕಿನ ಆನಂದಪುರಂದಲ್ಲಿರುವ ಚಂಪಕ ಸರಸು ಪುಷ್ಕರಣಿ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಜಲ ತಜ್ಞ ಶಿವಾನಂದ್ ಕಳವೆ ಚಾಲನೆ ನೀಡಿದರು.

ಇತಿಹಾಸ ಪ್ರಸಿದ್ಧ ಸ್ಥಳವಾದ ಚಂಪಕ‌ ಸರಸು ಕಲ್ಯಾಣಿಯನ್ನು ‘ಯಶೋಮಾರ್ಗ ಸಂಸ್ಥೆ’ಯಿಂದ ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಗಿದೆ.
ಹೈದರಾಬಾದ್ ಮೂಲದ ಫ್ರೀಡಂ ಆಯಿಲ್ ಅಸೋಸಿಯೇಷನ್ ನೇತೃತ್ವದಲ್ಲಿ ಕಾರ್ಯವನ್ನು‌ ಆರಂಭಿಸಿದ್ದು, ಈ ಜಾಗವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಯಶೋಮಾರ್ಗ ಸಂಸ್ಥೆಯು ಈಗಾಗಲೇ ರೂಪುರೇಷೆಗಳನ್ನು ಪ್ರಕಟಿಸಿದೆ. ಅಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಿರುವ ಕೆಲಸಗಳ ಬಗ್ಗೆಯೂ ಇಲ್ಲಿ‌ ತಿಳಿಸಲಾಗಿದೆ.

READ | ಅಮಾಯಕನ ಪ್ರಾಣ ನುಂಗಿದ ಅವೆಂಜರ್ ಬೈಕ್! ಯುವಕನ ಕೊಲೆಗೈದಿದ್ದ ನಾಲ್ವರು ಅರೆಸ್ಟ್
ಭಾನುವಾರ ನಡೆದ ವಿದ್ಯುಕ್ತ ಕಾರ್ಯಕ್ರಮದಲ್ಲಿ ಪರಿಸರವಾದಿ, ಲೇಖಕ ಹಾಗೂ ಜಲ ತಜ್ಞ ಶಿವಾನಂದ್ ಕಳವೆ ಅವರು ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಿದರು. ಜಲಮೂಲದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.
ಚಂಪಕ ಸರಸುಗೆ 400 ವರ್ಷಗಳ ಇತಿಹಾಸ
ಕೆಳದಿ ಅರಸ ರಾಜ ವೆಂಕಟಪ್ಪ ಕಾಲದಲ್ಲಿ ನಿರ್ಮಿಸಿರುವುದಾಗಿ ಹೇಳಲಾಗುವ ಚಂಪಕ ಸರಸು ಕಲ್ಯಾಣಿಯ ಸುತ್ತ ಹಲವು ಕಥೆಗಳು ತಳುಕು ಹಾಕಿಕೊಂಡಿವೆ.
ಈ ಪುಷ್ಕರಣಿಗೆ ಸುಮಾರು 400 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಮಲೆನಾಡಿನ ಪ್ರಕೃತಿ ಸೌಂದರ್ಯದ ನಡುವೆ ವಿರಾಜಮಾನವಾಗಿರುವ ಪುಷ್ಕರಣಿಗೆ ಕಾಯಕಲ್ಪ ನೀಡುವ ಕೆಲಸವಾಗಿಲ್ಲ. ಆದರೆ, ಯಶೋಮಾರ್ಗ ಸಂಸ್ಥೆ ಇದರ ಜೀರ್ಣೋದ್ಧಾರಕ್ಕೆ ಮುಂದೆ ಬಂದಿದೆ.

READ | ಎಫ್.ಡಿ.ಎ., ಎಸ್.ಡಿ.ಎ ಸೇರಿದಂತೆ 6,000 ಹುದ್ದೆಗಳ ನೇಮಕಾತಿಗೆ ಕೆಪಿಎಸ್‍ಸಿ ಗ್ರೀನ್ ಸಿಗ್ನಲ್

ಏನೇನು ಜೀರ್ಣೋದ್ಧಾರ?
ಪುಷ್ಕರಣಿಯ ಪರಿಸರವನ್ನು ಸ್ವಚ್ಚಗೊಳಿಸುವುದು, ಇಂಗು ಗುಂಡಿ ನಿರ್ಮಾಣ ಮಾಡುವುದು. ಜತೆಗೆ, ಸ್ಮಾರಕಕ್ಕೆ ರಕ್ಷಣೆ ನೀಡುವುದಕ್ಕಾಗಿ‌ ಗೇಟ್ ನಿರ್ಮಿಸುವುದು, ಕಾವಲುಗಾರರ ಮನೆ ಇತ್ಯಾದಿ ಜೀರ್ಣೋದ್ಧಾರ ಕಾರ್ಯ ಮಾಡಲಾಗುವುದು.
ಸಭೆಯಲ್ಲಿ ಶಿವಾನಂದ್ ಕಳವೆ, ಅಖಿಲ ಭಾರತ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಕೇಶ್, ರಾಜ್ಯ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ಸತೀಶ್ ಶಿವಣ್ಣ, ಪ್ರಮುಖರಾದ ಶ್ರೀಗಂಧ, ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನವೀನಾ ರವೀಂದ್ರಗೌಡ, ಉಪಾಧ್ಯಕ್ಷ ಮೋಹನ್ ಉಪಸ್ಥಿತರಿದ್ದರು.

https://www.suddikanaja.com/2021/01/14/notice-to-actor-yash-for-kgf-chapter-2-teaser-with-cigarette-scene/