ಶರಾವತಿ ನಗರ, ಹೊಸಮನೆಗೆ 2 ದಿನ ಕೊಳಚೆ ನೀರು ಪೂರೈಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಟ್ಯಾಂಕರ್ ತೊಳೆದುಕೊಳ್ಳಲು ಮನವಿ

ಸುದ್ದಿ ಕಣಜ.ಕಾಂ | CITY | WATER SUPPLY 
ಶಿವಮೊಗ್ಗ: ಶರಾವತಿ ನಗರ ಮತ್ತು ಹೊಸಮನೆಗೆ ಎರಡು ದಿನಗಳಿಂದ ಕೊಳಚೆ ನೀರು ಪೂರೈಸಿದ್ದಾರೆ ಎನ್ನಲಾದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಆಗ್ರಹಿಸಿದ್ದಾರೆ.
ನಗರದ ಕುವೆಂಪು ರಸ್ತೆಯಲ್ಲಿ ಭಾನುವಾರದಂದು ಸ್ಮಾರ್ಟ್ ಸಿಟಿಯ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಯುಜಿಡಿ ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಒಡೆದಿದೆ. ಸುಮಾರು 250ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಆರು ಇಂಚಿನ ಪೈಪ್ ಲೈನ್ ಮುಖಾಂತರ ಯುಜಿಡಿ ನೀರು ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರಿಗೆ ಪೂರ್ವ ಮಾಹಿತಿಯೇ ನೀಡಿಲ್ಲ

ಕೊಳಚೆ ನೀರು ಪೂರೈಕೆ ಮಾಡುತ್ತಿದ್ದರೂ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಪೂರ್ವ ಮಾಹಿತಿ ನೀಡಿಲ್ಲ. ಅಂತಹ ನೀರನ್ನೇ ಶರಾವತಿ ನಗರ ಬಿ ಬ್ಲಾಕ್ ಮತ್ತು ಹೊಸಮನೆಯ ಕೆಲವು ಮನೆಗಳ ನಿವಾಸಿಗಳು ದಿನವೂ ಬಳಸಿದ್ದಾರೆ. ಹೀಗಾಗಿ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊಳಚೆ ನೀರು ಪೂರೈಕೆ ಆಗಿರುವುದರಿಂದ ಸಾರ್ವಜನಿಕರು ತಮ್ಮ ಮನೆಯಲ್ಲಿನ ಟ್ಯಾಂಕರ್ ಗಳನ್ನು  ಸ್ವಚ್ಚಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

https://www.suddikanaja.com/2021/03/31/army-tanker-and-air-jet-install-in-mrs-circle/