ಶಿವಮೊಗ್ಗದಲ್ಲಿ ನಡೀತು ಚಿಕ್ಕಮಗಳೂರಿನ 17 ವರ್ಷದ ಬಾಲಕಿಯ ಅಪರೂಪದ ಸರ್ಜರಿ, ಇದು ರಾಜ್ಯದಲ್ಲೇ ಮಾಡೆಲ್

 

ಸುದ್ದಿ ಕಣಜ.ಕಾಂ | DISTRICT | HEALTH
ಶಿವಮೊಗ್ಗ: ಚಿಕ್ಕಮಗಳೂರಿನ 17 ವರ್ಷದ ಬಾಲಕಿಯ ಕಲೆರಹಿತ ಥೈರಾಯ್ಡ್ ಶಸ್ತ್ರಚಿಕಿತ್ಸೆಯನ್ನು ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ. ವಿಶೇಷವೆಂದರೆ, ಇದು ರಾಜ್ಯದಲ್ಲೇ ವಿನೂತನ ಸರ್ಜರಿಯಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಆಸ್ಪತ್ರೆಯ ಎಂ.ಡಿ. ಡಾ.ನಾಗೇಂದ್ರ, ವೈದ್ಯರ ತಂಡ ನಡೆಸಿದ ಶಸ್ತ್ರಚಿಕಿತ್ಸೆ ಐತಿಹಾಸಿಕ ಸಾಧನೆಯಾಗಿದೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಇದು ಮೈಲ್ ಸ್ಟೋನ್ ಆಗಿದೆ ಎಂದರು.

ಥೈರಾಯ್ಡ್ ಸರ್ಜರಿಯ ಬಗ್ಗೆ ಆತಂಕದಲ್ಲಿ ಕುಟುಂಬದ ಸದಸ್ಯರ ಮನವೊಲೈಸಿ ವಿನೂತನ ಪದ್ಧತಿಯ ಬಗ್ಗೆ ಮಾಹಿತಿ ನೀಡಿದಾಗ ಅವರು ಸಹ ಒಪ್ಪಿಕೊಂಡಿದ್ದರು. ಶಸ್ತ್ರಚಿಕಿತ್ಸೆಯಾದ ಅರ್ಧ ಗಂಟೆಯಲ್ಲಿಯೇ ಬಾಲಕಿಯು ಮಾತನಾಡಲು ಆರಂಭಿಸಿದ್ದಾಳೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಮ್ಯಾಕ್ಸ್ ಆಸ್ಪತ್ರೆಯ ಎಂ.ಡಿ. ಡಾ.ನಾಗೇಂದ್ರ ಮಾತನಾಡಿದರು.

ಕಲೆ ರಹಿತ ಶಸ್ತ್ರಚಿಕಿತ್ಸೆ, ಆಗುವ ಖರ್ಚೆಷ್ಟು?
ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರು ಡೇ ಕೇರ್ ಮಾದರಿಯಲ್ಲಿಯೇ 24 ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಬಹುದು. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ಕಲೆ ಉಳಿಯುವ ಸಾಧ್ಯತೆ ಇರುತ್ತದೆ. ಆದರೆ, ಸುಧಾರಿತ ಶಸ್ತ್ರಚಿಕಿತ್ಸೆಯಿಂದಾಗಿ ಯಾವುದೇ ರೀತಿಯ ಗುರುತು ಉಳಿದಿಲ್ಲ ಎಂದು ಆಸ್ಪತ್ರೆಯ ಎಂಡೋಕ್ರೈನ್ ಮತ್ತು ಅಂಕೋಪ್ಲಾಸ್ಟಿಕ್ ಸ್ತನ ಚಿಕಿತ್ಸಕ ಡಾ. ಎಂ.ಶ್ರೇಯಾಂಸ್ ಹೇಳಿದರು.
ಬಾಯಿಯ ಒಳಭಾಗದಲ್ಲಿ ರಂಧ್ರ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ನಂತರ, ಆ ಸ್ಥಳದಲ್ಲಿ ಸಣ್ಣ ಹೊಲಿಗೆ ಹಾಕುವುದರಿಂದ ಅದು ಕರಗಿ ಹೋಗುತ್ತದೆ. ಆದ್ದರಿಂದ ಗುರುತು ಇರುವುದಿಲ್ಲ. ಇದಕ್ಕೆ 80 ಸಾವಿರ ರೂ. ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.
ವೈದ್ಯರಾದ ಡಾ.ನಾರಾಯಣ್ ಪಂಜಿ, ಡಾ.ಬಲ್ಲಾಳ್, ಡಾ.ಶಿವಕುಮಾರ್, ಡಾ.ಕೌಶಿಕ್ ನಾರಾಯಣ, ಡಾ.ಸ್ವಾತಿ ಉಪಸ್ಥಿತರಿದ್ದರು.

ವಿಡಿಯೋ ರಿಪೋರ್ಟ್ | ನಾಗರ ಹಾವುಗಳ ಮಧ್ಯೆ ಘನಘೋರ ಕಾಳಗ! ಸೆರೆಯಾಯ್ತು ಅಪರೂಪದ ದೃಶ್ಯ