ಶಿವಮೊಗ್ಗದವರಿಗೆ ಗುಡ್ ನ್ಯೂಸ್, ಉದ್ಘಾಟನೆ ಆಗಲಿದೆ ಮೈಸೂರ್ ಸ್ಯಾಂಡಲ್ ಮಳಿಗೆ

ಸುದ್ದಿ‌ ಕಣಜ.ಕಾಂ | DISTRICT | MARKET TRENDS
ಶಿವಮೊಗ್ಗ: ನಗರದ ಜೈಲು ರಸ್ತೆಯಲ್ಲಿರುವ ಸುಬ್ಬಯ್ಯ ಆಸ್ಪತ್ರೆ ಎದುರಿನ ತ್ರಿಶಾನ್ ಎಂಟರ್ ಪ್ರೈಸಸ್‌ನಲ್ಲಿ ಮೈಸೂರು ಸ್ಯಾಂಡಲ್  ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ಆಗಲಿದೆ.
ರಾಜ್ಯ ಸರ್ಕಾರದ ಉದ್ಯಮವಾದ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿ. (Karnataka Soaps and Detergents Limited) ವತಿಯಿಂದ ಅಕ್ಟೋಬರ್ 29ರಂದು ಬೆಳಗ್ಗೆ 10 ಗಂಟೆಗೆ ಮಳಿಗೆ ಉದ್ಘಾಟನೆಗೊಳ್ಳಲಿದೆ ಎಂದು ಕೆ.ಎಸ್.ಡಿ.ಎಲ್‌ ನಿರ್ದೇಶಕಿ ನಿವೇದಿತಾ ರಾಜು ಹೇಳಿದರು.

READ | ಶಿವಮೊಗ್ಗದಲ್ಲಿ ನಡೀತು ಚಿಕ್ಕಮಗಳೂರಿನ 17 ವರ್ಷದ ಬಾಲಕಿಯ ಅಪರೂಪದ ಸರ್ಜರಿ, ಇದು ರಾಜ್ಯದಲ್ಲೇ ಮಾಡೆಲ್

ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ, ಎಂಐಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿ. ಅಧ್ಯಕ್ಷರೂ‌ ಆದ ಶಾಸಕ ಮಾಡಳ್ ವಿರೂಪಾಕ್ಷಪ್ಪ, ಆಡಳಿತ ನಿರ್ದೇಶಕ ಮಹೇಶ್ ಬಿ.ಶಿರೂರ್, ಮಹಾ ಪ್ರಬಂಧಕ ಸಿ.ಎಂ.ಶಿವಕುಮಾರ್, ನಿರ್ದೇಶಕ ಮಲ್ಲಿಕಾರ್ಜುನ್ ಸವಕ್ಕರ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಯಾವ ಉತ್ಪನ್ನಗಳು ಲಭ್ಯ?
ಮೈಸೂರು ಸ್ಯಾಂಪಲ್‌ ಸೋಪ್, ಸುಗಂಧ ದ್ರವ್ಯಗಳು, ಪೌಡರ್, ಅಗರಬತ್ತಿ, ಧೂಪ, ಡಿಂಟರ್ಜೆಂಟ್‌ ಸೇರಿ 10ಕ್ಕೂ ಅಧಿಕ ಪ್ರಭೇದದ ಉತ್ಪನ್ನಗಳು ಸಿಗಲಿವೆ ಎಂದರು.

READ | ಶಿವಮೊಗ್ಗದ ಮುಂದುವರಿದ target businessmen, ವಾಟ್ಸಾಪ್ ನಲ್ಲಿ ಬೆದರಿಕೆ ಕರೆ, ಮನೆ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿಯ ಎಚ್ಚರಿಕೆ

ಶ್ರೀಗಂಧದ ತವರಲ್ಲಿ ಮೊದಲ ಮಳಿಗೆ
ಶ್ರೀಗಂಧದ ತವರು ಜಿಲ್ಲೆ ಖ್ಯಾತಿಯ ಶಿವಮೊಗ್ಗದಲ್ಲಿ ಮೊದಲ ಮಳಿಗೆ ಆರಂಭಿಸಲಾಗುತ್ತಿದೆ. ಈಗಾಗಲೇ ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಚಿತ್ರದುರ್ಗದಲ್ಲಿ ಮಾರಾಟ ಮಳಿಗೆಗಳಿವೆ. ಶಿವಮೊಗ್ಗದಲ್ಲಿ‌ ಇರಲಿಲ್ಲ. ಈ‌ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗದ ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಅಗರಬತ್ತಿ ತಯಾರಿಕ ಯೋಜನೆಯನ್ನು ಸಹ ರೂಪಿಸಲು ಉದ್ದೇಶಿಲಾಗಿದೆ ಎಂದರು.
ಬಿಜೆಪಿ ಮುಖಂಡರಾದ ಪದ್ಮಿನಿ, ವಿದ್ಯಾ ಉಪಸ್ಥಿತರಿದ್ದರು.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

ಅಡಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರಿಸಿ ಎಡವಟ್ಟು, ಬೆಳೆಗಾರರ ಆಕ್ರೋಶ