ಶಿವಮೊಗ್ಗದಲ್ಲಿ‌ ಇದೇ‌‌‌‌ ಮೊದಲು ರಗ್ಬಿ ಟೂರ್ನಮೆಂಟ್, ಎಷ್ಟು ಜಿಲ್ಲೆಗಳು ಭಾಗವಹಿಸಲಿವೆ ಗೊತ್ತಾ?

ಸುದ್ದಿ‌ ಕಣಜ.ಕಾಂ | DISTRICT | SPORTS NEWS
ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ಅಕ್ಟೋಬರ್ 31ರಂದು ಜಿಲ್ಲಾಮಟ್ಟದ ರಗ್ಬಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ರಗ್ಬಿ ಅಸೋಸಿಯೇಷನ್ ಅಧ್ಯಕ್ಷ ಎಚ್.ಆರ್.ವಿನಯ್ ಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಮೊದಲ‌‌ ಸಲ ರಗ್ಬಿ ಪಂದ್ಯಾವಳಿ ಆಯೋಜಿಸಲಾಗಿದ್ದು,‌ ನೂತನ ಕ್ರೀಡೆಯನ್ನು ಪರಿಚಯಿಸಲು ಪಂದ್ಯ ಸಂಘಟಿಸಲಾಗುತ್ತಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
12 ಜಿಲ್ಲೆಯ ತಂಡಗಳು ಟೂರ್ನಿಯಲ್ಲಿ ಭಾಗಿ
ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಆತಿಥೇಯ ಶಿವಮೊಗ್ಗ ಸೇರಿ 12 ತಂಡಗಳು ಭಾಗವಹಿಸಲಿವೆ ಎಂದರು.

READ | ಶಿವಮೊಗ್ಗದವರಿಗೆ ಗುಡ್ ನ್ಯೂಸ್, ಉದ್ಘಾಟನೆ ಆಗಲಿದೆ ಮೈಸೂರ್ ಸ್ಯಾಂಡಲ್ ಮಳಿಗೆ

ಸಂಸದರಿಂದ ಪಂದ್ಯಾವಳಿ ಉದ್ಘಾಟನೆ
ಬೆಳಗ್ಗೆ 9ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಭಾಗವಹಿಸಲಿದ್ದಸರೆ ಎಂದು ಹೇಳಿದರು.
ಪ್ರಮುಖರಾದ ಆರ್.ಎಸ್.ಪ್ರಸನ್ನ, ಯೋಗೇಶ್, ಎಸ್.ಸ್ನೇಹಾ ಸೇರಿದಂತೆ ಅಸೋಸಿಯೇಷನ್ ಪದಾಧಿಕಾರಿ ಉಪಸ್ಥಿತರಿದ್ದರು.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಕ್ರೀಡೆ , ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/06/02/covid-third-wave-may-hit-children-preparation-made-in-shivamogga/