ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಒಟ್ಟು 225 ಆಹಾರ ವಿಶ್ಲೇಷಕರು ಮತ್ತು ಉಪ ವ್ಯವಸ್ಥಾಪಕರು ಸೇರಿ ನಾನಾ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಕರೆಯಲಾಗಿದೆ. ಅರ್ಹರು ನವೆಂಬರ್ 7ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 8 ನಂತರ ಅರ್ಜಿ ಸಲ್ಲಿಸಬಹುದು.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
READ | ಎನ್ಪಿಸಿಐಎಲ್ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಸಲು 11 ದಿನ ಮಾತ್ರ ಬಾಕಿ
ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಿನ್ಸಿಪಲ್ ಮ್ಯಾನೇಜರ್ 1 (ಸ್ನಾತಕೋತ್ತರ), ಸಹಾಯಕ ನಿರ್ದೇಶಕರು 15 (ಪದವಿ, ಎಂಬಿಎ, ಸ್ನಾತಕೋತ್ತರ ಹಾಗೂ ಬಿಟೆಕ್),ಉಪ ವ್ಯವಸ್ಥಾಪಕರು 4 (ಸ್ನಾತಕೋತ್ತರ, ಪದವಿ), ತಾಂತ್ರಿಕ ಅಧಿಕಾರಿ 125 (ಬಿಇ, ಬಿಟೆಕ್, ಸ್ನಾತಕೋತ್ತರ),ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿ 37 (ಪದವಿ, ಸ್ನಾತಕೋತ್ತರ), ಸಹಾಯಕ ವ್ಯವಸ್ಥಾಪಕರು 8 (ಪದವಿ, ಸ್ನಾತಕೋತ್ತರ),ಸಹಾಯಕರು 33 (ಪದವಿ, ಸ್ನಾತಕೋತ್ತರ, ಎಂಟೆಕ್),ವೈಯಕ್ತಿಕ ಸಹಾಯಕರು 19 (ಪದವಿ, ಡಿಪ್ಲೋಮಾ), ಕಿರಿಯ ಸಹಾಯಕರು 3 (ಪಿಯುಸಿ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪ್ರಿನಿಪಲ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ 50 ವರ್ಷದೊಳಗಿರಬೇಕು. ಸಹಾಯಕ ನಿರ್ದೇಶಕರು, ಉಪ ವ್ಯವಸ್ಥಾಪಕರು, ಆಹಾರ ವಿಶ್ಲೇಷಕರ ಹುದ್ದೆಗೆ 35 ವಯೋಮಿತಿ ಮೀರಿರುವಂತಿಲ್ಲ. ಹಾಗೆಯೇ, ಕಿರಿಯ ಸಹಾಯಕ ಹುದ್ದೆ ಹೊರತು ಪಡಿಸಿ ಉಳಿದ ಹುದ್ದೆಗಳಿಗೆ 30 ವಯೋಮಿತಿ ಹೊಂದಿರಬೇಕು. ಒಂದುವೇಳೆ, ಒಬಿಸಿ ಮೀಸಲಾತಿ ಇದ್ದರೆ ಅಂತಹವರಿಗೆ ಮೂರು ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಐದು ವರ್ಷ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕವು ಸಾಮಾನ್ಯ, ಹಿಂದುಳಿದ ವರ್ಗದವರಿಗೆ ₹ 1,500 ಹಾಗೂ ಎಸ್ಸಿ, ಎಸ್ಟಿ, ಮಹಿಳೆಯರು, ಮಾಜಿ ಸೈನಿಕರು, ವಿಕಲಚೇತನರಿಗೆ ₹ 500 ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.