ಸುದ್ದಿ ಕಣಜ.ಕಾಂ | KARNATAKA | EDUCATION CORNER
ಶಿವಮೊಗ್ಗ: ಜನರಲ್ ಕ್ಯಾಟಗರಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್ ಅನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದು, ಅದನ್ನು ಪುನರಾರಂಭಿಸಬೇಕು ಎಂದು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಕಾರ್ಯಕ್ರಮ ಜಾರಿಗೊಳಿಸಿದೆ. ಇದು ಕೇಂದ್ರದಿಂದ ಪುರಸ್ಕೃತ ಯೋಜನೆಯಾಗಿದೆ. ಹಲವು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತಿದ್ದು, ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತಿದೆ. ಆದರೆ, ಇಂತಹ ಮಹತ್ವಕಾಂಕ್ಷಿ ಯೋಜನೆ ಸ್ಥಗಿತಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆಯಲಿರುವ ಬೈ ಎಲೆಕ್ಷನ್ ನಂತರ ನಿಗಮ, ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕದ ಬಗ್ಗೆ ಪಕ್ಷ ನಿರ್ಧರಿಸಿದೆ. ಆದರೆ, ನಾನು ಅಧ್ಯಕ್ಷನಾಗಿ ಮುಂದುವರಿಸುವ ಕುರಿತು ಲಾಬಿ ಮಾಡುವುದಿಲ್ಲ. ಒಂದುವೇಳೆ, ಜವಾಬ್ದಾರಿ ನೀಡಿದರೆ ಅದನ್ನು ಚಾಚೂ ತಪ್ಪದೆ ಪಾಲಿಸುವೆ.
–ಡಿ.ಎಸ್.ಅರುಣ್, ಅಧ್ಯಕ್ಷ, ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ
ರಾಜ್ಯ ಸರ್ಕಾರವು ಸಾಮಾನ್ಯ ವರ್ಗಕ್ಕೆ ಸೇರಿರುವ ಆರ್ಥಿಕವಾಗಿ ಹಿಂದುಳಿದ ಇತರೆ ಸಮುದಾದವರಿಗೆ ಶೇ.5ರಷ್ಟು ಮೀಸಲಾತಿ ನೀಡಿದೆ. ಈ ಮೀಸಲಾತಿಯನ್ನು ಸರ್ಕಾರ ರದ್ದುಗೊಳಿಸಿದ್ದು ಅದನ್ನು ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
READ | ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರವೇಶಕ್ಕೆ ಸುವರ್ಣ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಎರಡು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ
ಆರ್ಯವೈಶ್ಯ ನಿಗಮದ ಅಧ್ಯಕ್ಷನಾಗಿ ಎರಡು ವರ್ಷ ಗತಿಸಿದೆ. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಹಳನ್ನು ಮಾಡಿದ್ದೇನೆ. ಈ ಅವಧಿಯಲ್ಲಿ ₹16 ಕೋಟಿ ಅನುದಾನ ಮಂಜೂರಾಗಿದೆ. ಅದರಲ್ಲಿ 1,651 ಜನರಿಗೆ ಸಾಲ ನೀಡಡಲಾಗಿದೆ. ಶೇ.95ರಷ್ಟು ಮರು ಪಾವತಿಯಾಗಿದೆ. ಇದರೊಂದಿಗೆ ನಿಗಮದಲ್ಲಿ ನವ ತಂತ್ರಜ್ಞಾನಕ್ಕೂ ಒತ್ತು ನೀಡಲಾಗಿದೆ. ಈ ನಿಗಮದ ಹಲವು ಕಾರ್ಯಗಳು ಇತರೆ ನಿಗಮಗಳಲ್ಲಿ ಅಳವಡಿಸಿಕೊಳ್ಳುವ ಚಿಂತನೆ ನಡೆದಿದೆ ಎಂದರು.
ಅನುದಾನದ ಕೊರತೆ, ಶುಲ್ಕ ಮರುಪಾವತಿ ಡೌಟ್
ಈ ಸಾಲಿನಲ್ಲಿ ಈಗಾಗಲೇ ₹5 ಕೋಟಿ ಅನುದಾನ ಮಂಜೂರಾಗಿದೆ. ಸದರಿ ಅನುದಾನದಲ್ಲಿ ನಿಗಮದ ವತಿಯಿಂದ ಎರಡು ಸಾಲ ಯೋಜನೆ ಮಾತ್ರ ಅನುಷ್ಠಾಗೊಳಿಸಬಹುದು. ಅನುದಾನ ಕೊರತೆಯಿಂದ ಯಾವುದೇ ನವೀನ ಯೋಜನೆ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಈ ಸಲ 2,000 ವಿದ್ಯಾರ್ಥಿಗಳು ಶುಲ್ಕ ಮರು ಪಾವತಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇವರಿಗೆ ನಿಗಮದಿಂದ ಶುಲ್ಕ ಮರುಪಾವತಿ ಮಾಡಲಾಗದು. ಅದಕ್ಕಾಗಿ, ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ, ಡಿ.ಎಲ್.ಮಂಜುನಾಥ್, ಎಸ್.ಕೆ.ಶೇಷಾಚಲ, ಬೆಳಗೂರು ಮಂಜುನಾಥ್, ನಾಗರಾಜ್, ಅರವಿಂದ್, ಎಂ.ವಿ.ಮಂಜುನಾಥ್ ಉಪಸ್ಥಿತರಿದ್ದರು.
https://www.suddikanaja.com/2021/06/20/adoption-of-deer/