ಚಿತ್ರದುರ್ಗದಲ್ಲಿ‌ ಇಂದು ನಡೆಯಲಿದೆ ಉದ್ಯೋಗ ಮೇಳ,‌ ಪ್ರತಿಷ್ಠಿತ ಕಂಪನಿಗಳು ಭಾಗಿ, ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಅವಕಾಶ

 

 

ಸುದ್ದಿ‌ ಕಣಜ.ಕಾಂ‌ | KARNATAKA | JOB JUNCTION
ಚಿತ್ರದುರ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಅಕ್ಟೋಬರ್ 19ರಂದು ಬೆಳಗ್ಗೆ 10ರಿಣಮದ‌ಮಧ್ಯಾಹ್ಮ‌3 ಗಂಟೆಯವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶ ಇದೆ.
ಐಸಿಐಸಿಐ ಬ್ಯಾಂಕ್, ಯಶಸ್ವಿ ಗ್ರೂಪ್, ಹ್ಯುಂಡೈ ಮತ್ತಿತರ ಪ್ರತಿಷ್ಠಿತ ಕಂಪನಿಗಳು‌ ಮೇಳದಲ್ಲಿ ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದೆ.
ಪಿಯುಸಿ, ಐಟಿಐ, ಡಿಪ್ಲೋಮಾ, ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಬಿಎಂ, ಎಂಬಿಎ, ಎಂ.ಕಾಂ ಮತ್ತು ಪದವಿ ವಿದ್ಯಾರ್ಹತೆ ಹೊಂದಿರುವವರು ನೇರ ಸಂದರ್ಶನದಲ್ಲಿ‌ ಭಾಗವಹಿಸಲು ತಿಳಿಸಲಾಗಿದೆ. 18 ರಿಂದ 28 ವಯೋಮಿತಿ ಹೊಂದಿರುವವರು .
ನೇರ‌‌ ಸಂದರ್ಶನಕ್ಕೆ‌ ಹಾಜರಾಗುವಾಗ ಅಭ್ಯರ್ಥಿಗಳು ನಾಲ್ಕು ಪ್ರತಿ ಬಯೋಡೇಟಾ, ವಿದ್ಯಾರ್ಹತೆ ಪ್ರಮಾಣ ಪತ್ರ, ಬಾವಚಿತ್ರಗಖು ಹಾಗೂ ಆಧಾರ್ ಕಾರ್ಡ್ ಜೊತೆಯಲ್ಲಿ ತರಬೇಕು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಂಪರ್ಕ ಸಂಖ್ಯೆ: 7022459064ಗೆ ಸಂಪರ್ಕಿಸಬಹುದು.

error: Content is protected !!