ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಸೃಷ್ಟಿಸಿದ ಅನಾಹುತ, ಹಲವೆಡೆ ಧರೆಗೆ ಕುಸಿದ ಮರ

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯಲ್ಲಿ‌ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆ ಹಲವೆಡೆ ಅನಾಹುತಗಳನ್ನು ಸೃಷ್ಟಿಸಿದೆ.
ಸಂಜೆ ಒಂದು ಗಂಟೆ ಸುರಿದ ಮಳೆಯು ಶಿವಮೊಗ್ಗ ನಗರದಲ್ಲಿ ಭಾರಿ ಅನಾಹುತ ಮಾಡಿದೆ. ಜೋಸೆಫ್ ನಗರದಲ್ಲಿ ಮರಗಳು ಧರೆಗೆ ಉರುಳಿವೆ. ಮರವೊಂದು ದ್ವಿಚಕ್ರ ವಾಹನದ ಮೇಲೆ ಬಿದ್ದಿದ್ದು, ವಿದ್ಯುತ್ ಕಡಿತಗೊಂಡಿದೆ.
ವರ್ಷಧಾರೆ ಮುಂದುವರಿದಿದ್ದು, ಅನಾಹುತಗಳನ್ನು ಸೃಷ್ಟಿಸಿದೆ. ಜೊತೆಗೆ, ನಗರದ ಹಲವೆಡೆ ರಸ್ತೆಗಳಲ್ಲಿ ಚರಂಡಿಯ ನೀರು ತುಂಬಿ ಹರಿಯುತ್ತಿವೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

error: Content is protected !!