ಮಂಗಳೂರು ಕಸ್ಟಮ್ಸ್ ಕಚೇರಿಯಲ್ಲಿ 8, 10ನೇ, ಐಟಿಐ ಪಾಸಾದವರಿಗೆ ಉದ್ಯೋಗ ಅವಕಾಶ, ಆಕರ್ಷಕ ವೇತನ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಮಂಗಳೂರು: ಮಂಗಳೂರಿನ ಕಸ್ಟಮ್ಸ್ ಕಮಿಷನರೇಟ್ ಕಚೇರಿಯಲ್ಲಿ ಎಂಟನೇ, ಹತ್ತನೇ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಸುವರ್ಣ ಅವಕಾಶವಿದೆ.

ಅರ್ಹ ಅಭ್ಯರ್ಥಿಗಳು ಕಸ್ಟಮ್ಸ್ ಆಯುಕ್ತರ ಕಚೇರಿ, ಹೊಸ ಕಸ್ಟಮ್ಸ್ ಹೌಸ್, ಪಣಂಬೂರ್, ಮಂಗಳೂರು 575010 ಈ ವಿಳಾಸಕ್ಕೆ ಅರ್ಜಿಗಳನ್ನು ಪೋಸ್ಟ್ ಮೂಲಕ ಸಲ್ಲಿಸಬಹುದಾಗಿದೆ. ನವೆಂಬರ್ 30 ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ.

ಸಿ-ಗ್ರೂಪ್ ನ ಒಟ್ಟು 19 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ನಡೆಯಲಿದೆ. ಇದರಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗದ ಕನಸು ಈಡೇರಲಿದೆ.

ಹುದ್ದೆ ಹೆಸರು ಹುದ್ದೆ ಸಂಖ್ಯೆ  ವಿದ್ಯಾರ್ಹತೆ ವೇತನ ವಯೋಮಿತಿ
ಸೀಮ್ಯಾನ್ 7 10ನೇ ತರಗತಿ/ ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಹೆಲ್ಮ್ಸ್ ಮ್ಯಾನ್ ಮತ್ತು ಸೀಮ್ಯಾನ್ ವೃತ್ತಿಯಲ್ಲಿ 2 ವರ್ಷ ಅನುಭವ 18,000-56,900 18-25
ವರ್ಷ
ಗ್ರೀಸರ್ 3 10ನೇ ತರಗತಿ/ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಮುಖ್ಯ ಮತ್ತು ಆಕ್ಸಿಲಿಯರಿ ಮೆಷಿನರಿ ನಿರ್ವಹಣೆಯಲ್ಲಿ ಕನಿಷ್ಠ 3 ವರ್ಷದ ವೃತ್ತಿ ಅನುಭವ 18,000-56,900 18-25
ವರ್ಷ
ಟ್ರೇಡ್ಸ್ ಮ್ಯಾನ್  1  ಮೆಕ್ಯಾನಿಕ್/ ಡೀಸೆಲ್/ ಫಿಟ್ಟರ್/ ಟರ್ನರ್/ ವೆಲ್ಡರ್/ ಎಲೆಕ್ಟ್ರಿಷಿಯನ್/ ಇನ್ ಸ್ಟ್ರುಮೆಂಟಲ್ ಮತ್ತು ಕಾರ್ಪೆಂಟ್ರಿ ಯಾವುದೇ ವಿಭಾಗದಲ್ಲಿ ಐಟಿಐ ಉತ್ತೀರ್ಣರಾಗಿರಬೇಕು 19,900-63,200 25
ವರ್ಷ ಮೀರಿರುವಂತಿಲ್ಲ 
ಲಾಂಚ್ ಮೆಕ್ಯಾನಿಕ್  2   8ನೇ ತರಗತಿ ಉತ್ತೀರ್ಣರಾಗಿದ್ದು, ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಜೊತೆಗೆ 1 ವರ್ಷ ಎಂಜಿನ್ ಮತ್ತು ಅಕ್ಸಿಲರಿ ಮೆಷಿನರಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿರಬೇಕು.  25,500-81,100 30
ವರ್ಷ
ಸುಖನಿ 1 8ನೇ ತರಗತಿ ಉತ್ತೀರ್ಣರಾಗಿದ್ದು, ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 7 ವರ್ಷ ವೃತ್ತಿ ಅನುಭವ, 2 ವರ್ಷ ಮೆಕ್ಯಾನೈಸ್ಡ್ ಕ್ರಾಫ್ಟ್ ಮತ್ತು ಆಕ್ಸಿಲರಿ ಸೇಲ್ಸ್ ನಲ್ಲಿ ಸ್ವತಂತ್ರವಾಗಿ ವೃತ್ತಿ ನಿರ್ವಹಣೆ   25,500-81,100  30
ವರ್ಷ
ಸೀನಿಯರ್ ಡೆಕ್ಕಾಂದ್  2 8ನೇ ತರಗತಿ ಪಾಸಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 5 ವರ್ಷ ವೃತ್ತಿ ಅನುಭವ ಹಾಗೂ 2 ವರ್ಷ ಹೆಲ್ಮ್ಸ್ ಮ್ಯಾನ್ ಮತ್ತು ಸೀಮ್ಯಾನ್ ವೃತ್ತಿ ನಿರ್ವಹಿಸಿರಬೇಕು. 21,700-69,100  30
ವರ್ಷ 
ಎಂಜಿನ್ ಡ್ರೈವರ್  3  8ನೇ ತರಗತಿ/ ಮೆಟ್ರಿಕ್ ಉತ್ತೀರ್ಣರಾಗಿರಬೇಕು. ಸಮುದ್ರದಲ್ಲಿ ಚಲಿಸುವ ಹಡಗಿನಲ್ಲಿ ಕನಿಷ್ಠ 10 ವರ್ಷದ ವೃತ್ತಿ ಅನುಭವ ಹಾಗೂ ಆಕ್ಸಿಲರಿ ಮೆಷನರಿಯಲ್ಲಿ 1 ವರ್ಷ ಸ್ವತಂತ್ರವಾಗಿ ಕೆಲಸ ನಿರ್ವಹಿಸಿರಬೇಕು.  25,500-81,100  35
ವರ್ಷ

WEBSITE

NOTIFICATION & APPLICATION

https://www.suddikanaja.com/2021/09/28/jobs-in-iocl/

error: Content is protected !!