ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಮಂಡಳಿ(ಎಂಒಬಿಎಸ್)ಯು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 27 ಅಂತಿಮ ದಿನವಾಗಿದೆ.
ಗರಿಷ್ಠ ವಯೋಮಿತಿ, ಆಯ್ಕೆ ಪ್ರಕ್ರಿಯೆ
ಎಂಬಿಬಿಎಸ್, ಪಿಜಿ ಡಿಗ್ರಿ, ಡಿಪ್ಲೋಮಾ, ಎಂಡಿ, ಎಂಸಿಎಚ್ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಸಂದರ್ಶನ ಬಳಿಕ ಆಯ್ಕೆ ಮಾಡಲಾಗುವುದು.
ಹುದ್ದೆ ಹೆಸರು | ಹುದ್ದೆಗಳು |
ಸೂಪರ್ ಸ್ಪೆಷಿಯಲಿಸ್ಟ್ ಮೆಡಿಕಲ್ ಆಫೀಸರ್ (ಸೆಕೆಂಡ್ ಇನ್ ಕಮಾಂಡ್) | 5 |
ಸ್ಪೆಷಿಯಲಿಸ್ಟ್ ಮೆಡಿಕಲ್ ಆಫೀಸರ್ (ಡೆಪ್ಯೂಟಿ ಕಮಾಂಡಂಟ್) | 201 |
ಮೆಡಿಕಲ್ ಆಫೀಸರ್ (ಅಸಿಸ್ಟಂಟ್ ಕಮಾಂಡಂಟ್) | 345 |
ಡೆಂಟಲ್ ಸರ್ಜನ್ (ಅಸಿಸ್ಟಂಟ್ ಕಮಾಂಡಂಟ್) | 2 |