ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ತಾಲೂಕಿನ ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹೊಸ ವೃತ್ತಿಗಳನ್ನು ಪ್ರಾರಂಭಿಸಲು ತರಬೇತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಸಾಮಾನ್ಯ ವರ್ಗದ ಹಾಗೂ ನಿಯಮಾನುಸಾರ ಮೀಸಲಾತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
6 ತಿಂಗಳ ಅಡ್ವಾನಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್, 2 ವರ್ಷಗಳ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಹಾಗೂ 1 ವರ್ಷಗಳ ಇಂಡಸ್ಟ್ರೀಯಲ್ ರೋಬೋಟಿಕ್ ಆಂಡ್ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್ ವೃತ್ತಿಗಾಗಿ ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಅಕ್ಟೋಬರ್ 21ರೊಳಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ), ಗಾಜನೂರು ಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಮಾಹಿತಿಗಾ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಖುದ್ದಾಗಿ ಭೇಟಿ ನೀಡಬಹುದು. ಇಲ್ಲವೇ ದೂರವಾಣಿ ಸಂಖ್ಯೆ 08182-234054 ಕರೆ ಮಾಡುವಂತೆ ಸೂಚಿಸಲಾಗಿದೆ.
https://www.suddikanaja.com/2021/10/04/jobs-in-npcil/