ತುಂಗಾ ನದಿಗೆ ಬಿದ್ದಿದ್ದ ವ್ಯಕ್ತಿ ಸೇಫ್, ಈತ ಬದುಕಿದ್ದು ಹೇಗೆ ಗೊತ್ತಾ?

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ತುಂಗಾ ಹೊಳೆಯ ಹಳೇ ಸೇತುವೆಯ ಮೇಲಿನಿಂದ ಕಾಲು ಜಾರಿ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ರಕ್ಷಿಸಿದ್ದಾರೆ.
ತುಂಗಾನಗರ ನಿವಾಸಿ ತನ್ವೀರ್(35) ಎಂಬಾತ ಭಾನುವಾರ ಹೊಳೆಗೆ ಜಾರಿ ಬಿದ್ದಿದ್ದು, ಕರೆ ಬಂದಿದ್ದೇ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.

ತುಂಗಾ ನದಿಗೆ ಬಿದ್ದವನ ರಕ್ಷಣಾ ಕಾರ್ಯ ಹೇಗಿತ್ತು, ವಿಡಿಯೋ ವೀಕ್ಷಿಸಿ

ವ್ಯಕ್ತಿಯ ಸೊಂಟ, ಕಾಲಿಗೆ ಪೆಟ್ಟು
ತುಂಗಾ ಹೊಳೆಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ಬಿದ್ದಿದ್ದೇ ತನ್ವೀರ್ ಹುಲ್ಲಿನ ಮಧ್ಯೆ ಸಿಲುಕಿದ್ದಾನೆ. ನಂತರ, ಬೋಟ್ ಮೂಲಕ ತೆರಳಿ ಆತನನ್ನು ದಡಕ್ಕೆ ಕರೆದುಕೊಂಡು ಬರಲಾಗಿದೆ. ಸೇತುವೆಯಿಂದ ನೀರಿಗೆ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿವೆ. ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!