ತಮ್ನನ್ನು ತಾ ತೇಯ್ದು ಪರಿಮಳ ಸೂಸುವ ಪೊಲೀಸ್ ಇಲಾಖೆ ಶ್ರೀಗಂಧಕ್ಕೆ ಸಮ

 

 

ಸುದ್ದಿ ಕಣಜ.ಕಾಂ | DISTRICT | PROGRAM
ಶಿವಮೊಗ್ಗ: ಕುಟುಂಬಗಳನ್ನು ಮರೆತು ರಾಷ್ಟ್ರ ರಕ್ಷಣೆಗೆ ಜೀವವನ್ನೇ ಬಲಿದಾನ ನೀಡುವ ರಕ್ಷಣಾ ಇಲಾಖೆಗೆ ಸಮಾಜ ಕೃತಜ್ಞವಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಗುರುವಾರ ಆಯೋಜಿಸಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

police hutatma dina 1 1
ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಗುರುವಾರ ಆಯೋಜಿಸಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳು.

ಪೊಲೀಸರು ಕರ್ತವ್ಯಕ್ಕಾಗಿ ರಾತ್ರಿ ನಿದ್ದೆಗೆಟ್ಟರೆ ಸಮಾಜ ನೆಮ್ಮದಿಯಿಂದ ನಿದ್ದೆ ಮಾಡಬಲ್ಲದು. ಸಮಾಜದ ರಕ್ಷಣೆಗಾಗಿ ಶ್ರೀಗಂಧದಂತೆ ತಮ್ಮನ್ನು ತಾ ತೇಯ್ದುಕೊಳ್ಳುವ ಪೊಲೀಸ್ ಇಲಾಖೆಗೆ ಸದಾ ಋಣಿಯಾಗಿರಬೇಕು ಎಂದರು.
ಹುತಾತ್ಮರಿಗೆ ಗೌರವ ಸಲ್ಲಿಸಿದ ಇಲಾಖೆ
ಕರ್ತವ್ಯ ನಿರ್ವಹಣೆ ವೇಳೆ ವೀರ ಮರಣವನ್ನು ಹೊಂದಿದ ಪೊಲೀಸರಿಗೆ ನಮನ ಸಲ್ಲಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಲಾಯಿತು.
ಅವರು ಮಾಡಿದ ತ್ಯಾಗವನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುಸ್ತಫಾ ಹುಸೇನ್, ಎಸ್‍ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಹೆಚ್ಚುವರಿ ಎಸ್ಪಿ ಡಾ.ಎಚ್.ಟಿ.ಶೇಖರ್ ಇದ್ದರು. 

https://www.suddikanaja.com/2021/08/07/home-minister-portfolio-to-aaraga-jnanedra/

error: Content is protected !!