ಎಸ್.ಬಿ.ಐನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ, ಅರ್ಜಿ ಸಲ್ಲಿಕೆಗೆ 12 ದಿನ ಮಾತ್ರ ಬಾಕಿ

 

 

Rಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ‌. ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 28ರಿಂದಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 18 ಅಂತಿಮ ದಿನವಾಗಿದೆ.
ಅರ್ಜಿ ಸಲ್ಲಿಸಿದ ನಂತರವೂ ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ ಅದನ್ನು ಅಕ್ಟೋಬರ್ 18ರೊಳಗೆ ಮಾಡಲು ಕಾಲಾವಕಾಶವಿದೆ. ನವೆಂಬರ್ 2ರೊಳಗೆ ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆಯಬಹುದು. ನವೆಂಬರ್ 15ರಂದು ಪರೀಕ್ಷೆ ನಡೆಯಲಿದೆ.

READ | ಇಎಸ್‍ಐಸಿ ಡೆಂಟಲ್ ಕಾಲೇಜಿನಲ್ಲಿ ಉದ್ಯೋಗ ಅವಕಾಶ

ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ
ಎಂಬಿಎ, ಪಿಜಿಡಿಬಿಎಂ, ಎಂಎ, ಎಂಎಸ್ಸಿ, ಪದವಿ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಕನಿಷ್ಠ 25ರಿಂದ ಗರಿಷ್ಠ 40 ವಯಸ್ಸಿನವರಾಗಿರತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ‌.
ಹುದ್ದೆವಾರು ನೇಮಕಾತಿ
ಮ್ಯಾನೇಜರ್ (ಮಾರ್ಕೆಟಿಂಗ್) 12,ಡೆಪ್ಯೂಟಿ ಮ್ಯಾನೇಜರ್ ( ಮಾರ್ಕೆಟಿಂಗ್) 26,ಎಕ್ಸಿಕ್ಯೂಟಿವ್ 1, ರಿಲೇಷನ್‌ಶಿಪ್‌ ಮ್ಯಾನೇಜರ್ 314,ರಿಲೇಷನ್ ಮ್ಯಾನೇಜರ್ (ಟೀಮ್ ಲೀಡ್) 20, ಕಸ್ಟಮರ್ ರಿಲೇಷನ್‌ಶೀಪ್‌ ಎಕ್ಸಿಕ್ಯೂಟಿವ್ 217, ಇನ್‌ವೆಸ್ಟ್‌ಮೆಂಟ್‌ ಆಫೀಸರ್ 12, ಸೆಂಟ್ರಲ್ ರಿಸರ್ಚ್‌ ಟೀಮ್‌(ಪ್ರಾಡಕ್ಟ್‌ ಲೀಡ್) 2,ಸೆಂಟ್ರಲ್‌ ರಿಸರ್ಚ್‌ ಟೀಮ್ ( ಸಪೋರ್ಟ್‌) 2 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

SBI JOB NOTIFICATION 1

SBI JOB NOTIFICATION 2

CLICK HERE TO APPLY

CLICK HERE TO APPLY

https://www.suddikanaja.com/2021/10/06/application-called-for-recruitment-in-fssai/

error: Content is protected !!