ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಜೆ.ಸಿ.ರಸ್ತೆಯಲ್ಲಿ ಮಾರಿಕಾಂಬಾ ದೇವಸ್ಥಾನದ ಮುಂದೆ ಮಲಗಿದ್ದ ಗೋವು ಕಳ್ಳತನ ಮಾಡಿದ ಘಟನೆ ಇತ್ತೀಚೆಗೆ ನಡೆದಿದೆ.
ಅಂದಾಜು ₹8,000 ಮೌಲ್ಯದ ಗೋವನ್ನು ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಹೊತ್ತೊಯ್ಯಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಸದಸ್ಯ ಶ್ರೀರಾಮ ಅವರು ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
READ | ಒಳನಾಡು ಜಲಸಾರಿಗೆ ಇಲಾಖೆ ನೌಕರ ಹೃದಯಾಘಾತದಿಂದ ಸಾವು, ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ನಡೀತು ಪ್ರತಿಭಟನೆ
ಹಿಂಸಾತ್ಮಕವಾಗಿ ಗೋವು ಸಾಗಣೆ
ಮೂವರು ರಸ್ತೆಯಲ್ಲಿ ಮಲಗಿದ್ದ ಗೋವನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬಿಕೊಂಡು ಕರೆದೊಯ್ದಿದಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಐಪಿಸಿ ಕಲಂ 379, 1960ರ ಪ್ರಾಣಿ ಹಿಂಸೆ ನಿಷೇಧ ಕಾನೂನು ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ ದಾಖಲಾಗಿದೆ.