ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮೆಗ್ಗಾನ್ ವಿವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜೆ.ಎಫ್. 1,2,4,5 ರಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 13ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ, ಬಿ.ಎಸ್.ಎನ್.ಎಲ್. ಕ್ವಾರ್ಟರ್ಸ್, ಸರ್ಕ್ಯೂಟ್ ಹೌಸ್, ಎಸ್.ಪಿ.ಕಚೇರಿ, ಪೊಲೀಸ್ ಠಾಣೆ, ಸಾಗರ ಮುಖ್ಯ ರಸ್ತೆ, ಅಶೋಕ್ ನಗರ, ಎ.ಆರ್.ಬಿ.ಕಾಲೊನಿ, ನಾಗರಾಜಪುರ ಬಡಾವಣೆ, ಹೊಸಮನೆ, ಕುವೆಂಪು ರಸ್ತೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್ಲೈನ್ ರಸ್ತೆ, ಎಲ್.ಐ.ಸಿ.ಕಚೇರಿ, ಮಿಷನ್ ಕಾಂಪೌಂಡ್, ಜೈಲ್ ಸರ್ಕಲ್, ಹಂದಿಗೊಲ್ಲರಕೇರಿ, ವೀಣಾ ಶಾರದಾ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.