ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-4 ಫೀಡರ್ ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆ ಅಡಿ ನವೆಂಬರ್ 23ರಂದು ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮೀನಾಕ್ಷಿ ಭವನ್ ರಸ್ತೆ, ಬಾಪೂಜಿ ನಗರ, ಶಂಕರಮಠ ರಸ್ತೆ, ಸೋಮಯ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದುರ್ಗಿಗುಡಿ, ರಾಘವೇಂದ್ರ ಸ್ವಾಮಿ ದೇವಸ್ಥಾನ ವ್ಯಾಪ್ತಿಯಲ್ಲಿ ಕರೆಂಟ್ ಕಟ್
ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-2 ಫೀಡರ್ ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ನ.23 ರಂದು ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ಅಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆ ಇರಲ್ಲ.
ನಗರ ವ್ಯಾಪ್ತಿಯ ಪಾರ್ಕ್ ಬಡಾವಣೆ, ತಿಲಕ್ನಗರ, ದುರ್ಗಿಗುಡಿ, ರಾಘವೇಂದ್ರ ಸ್ವಾಮಿ ಮಠದ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ಶಿವಮೊಗ್ಗದಲ್ಲಿ ಸುರಿಯುತ್ತಿರುವ ಮಳೆಗೆ 130 ಹೆಕ್ಟೆರ್ ಬೆಳೆ ನಾಶ, 37 ಮನೆಗಳಿಗೆ ಹಾನಿ, ಎಲ್ಲಿ ಏನೇನು ಅನಾಹುತವಾಗಿದೆ?
ಬೆಕ್ಕಿನಕಲ್ಮಠ, ಮಾರಿಗದ್ದುಗೆ ವ್ಯಾಪ್ತಿಯಲ್ಲಿ ಇರಲ್ಲ
ನಗರ ಉಪವಿಭಾಗ-2ರ ಘಟಕ 4 ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಯು.ಜಿ ಕೇಬಲ್ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೆಳಕಂಡ ಪ್ರದೇಶಗಳಲ್ಲಿ ನ.23 ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಕ್ಕಿನಕಲ್ಮಠ, ಕೋಟೆ ರಸ್ತೆ , ಮಾರಿಗದ್ದುಗೆ, ಎಸ್.ಪಿ.ಎಂ ರಸ್ತೆ, ಒ.ಬಿ.ಎಲ್ ರಸ್ತೆ, ಪೆನ್ಶನ್ ಮೊಹಲ್ಲಾ, ಸಿ.ಎಲ್.ರಾಮಣ್ಣ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಅರೆ ದುರ್ಗಮ್ಮನ ಕೇರಿ, ಕೃಷ್ಣ ಕೆಫೆ ಕೆಳಗೆ, ಎಲ್ಐಸಿ ಆಫೀಸ್ ಹಿಂಭಾಗ, ಕೋಟೆ ಪೊಲೀಸ್ ಸ್ಟೇಷನ್ ರಸ್ತೆ, ಸೈನ್ಸ್ ಫೀಲ್ಡ್ ರಸ್ತೆ, ಸಾಯಿ ಎಕ್ಸ್ ಪೋರ್ಟ್ಸ್ ಬಿ.ಎಚ್. ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.