ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಹೊಸನಗರ ಪ್ರತಿಭೆಯ ಸಾಧನೆ, ವ್ಯಕ್ತವಾಗುತ್ತಿದೆ ಮೆಚ್ಚುಗೆ

 

ಸುದ್ದಿ ಕಣಜ.ಕಾಂ | TALUK | TALENT JUNCTION
ಹೊಸನಗರ: ತಾಲ್ಲೂಕಿನ ಗರ್ತಿಕೆರೆ ಎಣ್ಣೆನೋಡ್ಲು ಗ್ರಾಮದ ಯೋಗ ಪಟು ಕಾವ್ಯ ಅವರು ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದ್ದು, ಅವರಿಗೆ ಸನ್ಮಾನಿಸಲಾಯಿತು.

ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ವತಿಯಿಂದ ಓಡಿಶಾದಲ್ಲಿ ಆಯೋಜಿಸಿದ್ದ ಆರ್ಟಿಸ್ಟಿಕ್ಸ್ ಗ್ರೂಪ್ ಜೂನಿಯರ್ ಗರ್ಲ್ಸ್ ವಿಭಾಗದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾವ್ಯ ಅವರು ಸಾಧನೆ ಮಾಡಿದ್ದಾರೆ.

ವಾಲಿಬಾಲ್ ಅಂಗಣ ಉದ್ಘಾಟನೆ
ವಾಲಿಬಾಲ್ ಅಂಗಣವನ್ನು ಕಾವ್ಯ ಅವರು ಇತ್ತೀಚೆಗೆ ಉದ್ಘಾಟನೆ ಮಾಡಿದ್ದಾರೆ. ಎಣ್ಣೆನೋಡ್ಲು ಮಸ್ಜಿದ್ ನ ಗುರುಗಳಾದ ಗೌಸ್ ಸಾಬ್, ಕಾರ್ಯದರ್ಶಿ ಎ.ಬಿ.ವಜೀರ್ ಅಹಮದ್ ಸಾಬ್, ಜಲೀಲ್ ಸಾಬ್, ಅನ್ವರ್ ಸಾಬ್, ಮಿನಾಜೂದ್ದಿನ್, ಸಾಜಾನ್ ಸಾಬ್, ಇಮ್ತಿಯಾಜ್, ಖಲೀಲ್ ಸಾಬ್, ಗ್ರಾಮದ ಯುವಕರಾದ ಶೇರ್ ಅಖಿಲ್, ಆದಿಲ್, ಸುಹಿಲ್, ಇರ್ಫಾನ್, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್, ಎಣ್ಣೆನೋಡ್ಲು ಗರ್ತಿಕೆರೆ ಯುವಕರಾದ ನಯಾಜ್, ಶಾಹಿಲ್ ಹುಸೇನ್, ನಿಫಾಲ್, ಆಕೀಬ್, ಐ.ಕೆ.ಇಮ್ರಾನ್, ಇಮ್ರಾನ್ ಉಪಸ್ಥಿತರಿದ್ದರು.

ಶಿವಮೊಗ್ಗ ಮೃಗಾಲಯಕ್ಕೆ 1.2 ಟನ್ ಗಾತ್ರದ ನೀರು ಕುದುರೆ ಆಗಮನ, ಹೊಸ ಅತಿಥಿಗೆ ಭರ್ಜರಿ ರೆಸ್ಪಾನ್ಸ್