ಸುದ್ದಿ ಕಣಜ.ಕಾಂ | DISTRICT | RAILWAY NEWS
ಶಿವಮೊಗ್ಗ: ನೈಋತ್ಯ ರೈಲ್ವೆ ವ್ಯಾಪ್ತಿಯ ಹಲವು ರೈಲುಗಳ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಅದರಲ್ಲಿ ಶಿವಮೊಗ್ಗದಿಂದ ಹೊರಡುವ ಎರಡು ರೈಲುಗಳನ್ನು ಬದಲಾವಣೆ ಮಾಡಲಾಗಿದೆ.
ಮೈಸೂರು ತಾಳಗುಪ್ಪ ರೈಲಿಗೆ ಒಂದು ಕೋಚ್ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮೈಸೂರು-ತಾಳಗುಪ್ಪ (ರೈಲು ಸಂಖ್ಯೆ 16227) ರೈಲಿನಲ್ಲಿ ಇನ್ಮುಂದೆ ಹೆಚ್ಚುವರಿಯಾಗಿ ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗುವುದು. ನವೆಂಬರ್ 21ರಿಂದ ಇದು ಅನ್ವಯವಾಗಲಿದೆ. ಕೋಚ್ ಗಳ ಸಂಖ್ಯೆ 19 ಇರಲಿವೆ. ಅದೇ ರೀತಿ, ತಾಳಗುಪ್ಪ- ಮೈಸೂರು (ರೈಲು ಸಂಖ್ಯೆ 16228) ರೈಲಿನಲ್ಲಿ ಹೆಚ್ಚುವರಿ ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗುವುದು.
ಶಿವಮೊಗ್ಗ-ಚಿಕ್ಕಮಗಳೂರು ರೈಲು ಸಂಚಾರದಲ್ಲಿ ಕೆಲವು ಬದಲಾವಣೆ
ಶಿವಮೊಗ್ಗ ನಗರದಿಂದ ಚಿಕ್ಕಮಗಳೂರು (ರೈಲು ಸಂಖ್ಯೆ 07365) ರೈಲನ್ನು ತಾತ್ಕಾಲಿಕವಾಗಿ ಬೀರೂರಿನವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ನವೆಂಬರ್ 23ರಿಂದ ಇದು ಅನ್ವಯವಾಗಲಿದೆ.
https://www.suddikanaja.com/2021/06/22/talguppa-mysuru-train-service-start/