ಶಿವಮೊಗ್ಗ ಕ್ಕೆ ಆಗಮಿಸಿದ ನಟ ರಾಜ್ ಬಿ.ಶೆಟ್ಟಿ ‘ಗರುಡ ಗಮನ ವೃಷಭ ವಾಹನ’ ಬಗ್ಗೆ ಹೇಳಿದ್ದೇನು?

 

ಸುದ್ದಿ ಕಣಜ.ಕಾಂ | KARNATAKA | CINEMA NEWS
ಶಿವಮೊಗ್ಗ: ‘ಗರುಡ ಗಮನ ವೃಷಭವಾಹನ’ ಚಿತ್ರದ ಪ್ರಮೋಷನ್ ಗಾಗಿ ನಗರಕ್ಕೆ ಶುಕ್ರವಾರ ಆಗಮಿಸಿದ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಚಿತ್ರ ಶಿವಮೊಗ್ಗ ಸೇರಿ ರಾಜ್ಯದಾದ್ಯಂತ ಬಿಡುಗಡೆಗೊಂಡಿದೆ. ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಜನರು ಪ್ರೀತಿಯಿಂದ ಚಿತ್ರವನ್ನು ವೀಕ್ಷಿಸುತಿದ್ದಾರೆ ಎಂದು ರಾಜ್ ತಿಳಿಸಿದರು.

READ | ಭದ್ರಾವತಿಯಲ್ಲಿ ಸಿಕ್ತು 500 ಮುಖ ಬೆಲೆಯ 182 ನಕಲಿ ನೋಟುಗಳ ಕಂತೆ, ಇಬ್ಬರು ಅರೆಸ್ಟ್

ನಟ ರಾಜ್ ಶೆಟ್ಟಿ ಹೇಳಿದ್ದೇನು?
‘ನಿರ್ದೇಶಕನಾಗಿ ನನ್ನ ಎರಡನೇ ಸಿನಿಮಾ ಇದಾಗಿದೆ. ನಟನಾಗಿ ‘ಒಂದು ಮೊಟ್ಟೆಯ ಕಥೆ’ಯಿಂದ ಹಿಡಿದು ಇದುವರೆಗೆ ಎಳು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ’ ಎಂದರು.
ಒಂದು ಕಥೆಯನ್ನೇ ಹೀರೋ ಮಾಡುವ ಹೊಸತನ ಭಾರತೀಯ ಚಿತ್ರರಂಗದಲ್ಲಿ ನಡೆಯುತ್ತಿವೆ. ಈ ಚಿತ್ರದಲ್ಲಿ ಪುರಾಣದ ಕಥೆ, ಸನ್ನಿವೇಶಗಳನ್ನು ಆಧರಿಸಿ ಚಿತ್ರ ಹೊರತರುವುದು ಕಷ್ಟವಾಗಿತ್ತು. ಆದರೂ ಚಿತ್ರತಂಡ ಇದಕ್ಕಾಗಿ ಭಾರಿ ಶ್ರಮಿಸಿ ಸವಾಲಿನ ರೂಪದಲ್ಲಿ ನಿರ್ವಹಿಸಿದೆ. ಚಿತ್ರ ಬಿಡುಗಡೆಯಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

‘ಸರ್ಕಾರಿ ಪ್ರಾಥಮಿಕ ಶಾಲೆ’ ನನ್ನ ಮೊದಲ ಚಿತ್ರ. ಯಶಸ್ವಿ ಚಿತ್ರವಾಯ್ತು. ಈಗ ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ‘ಗರುಡ ಗಮನ ವೃಷಭವಾಹನ’ ಚಿತ್ರ ಬಿಡುಗಡೆಯಾಗಿ ಅತ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡದ ಪ್ರೇಕ್ಷಕರಿಗೆ ನನ್ನ ಅಭಿನಂದನೆಗಳು
– ರವಿ ರೈ ಕಳಸ, ನಿರ್ಮಾಪಕ

https://www.highperformancegate.com/cdeyj4mni3?key=f95ce548ba397001c5150fe03b415e4a

ಚಿತ್ರದಲ್ಲಿನ ಹಿಂಸೆಯ ಬಗ್ಗೆ ಹೇಳಿದ್ದಿಷ್ಟು…
‘ಗರುಡ ಗಮನ ವೃಷಭವಾಹನ’ ಚಿತ್ರದಲ್ಲಿನ‌ ಹಿಂಸೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಹಿಂಸೆ ಸಲ್ಲದು ಎಂಬ ಸಂದೇಶ ರವಾನಿಸಬೇಕಾದರೆ, ಹಿಂಸೆಯನ್ನು ತೋರಿಸುವುದು ಅನಿವಾರ್ಯ. ಆದ್ದರಿಂದ, ಚಿತ್ರದಲ್ಲಿ ಹಿಂಸೆ ಇದೆ ಎನಿಸುತ್ತದೆ’ ಎಂದರು.
ಮಾಧ್ಯಮಗೋಷ್ಠಿಯಲ್ಲಿ ನಟರಾದ ಅರ್ಪಿತ್, ಸಾಮುಯಲ್ ಬಂಗೇರಾ, ರಾಜೇಶ್ ಕಳಸೆ, ಗೋಪಾಲಕೃಷ್ಣ ದೇಶಪಾಂಡೆ ಉಪಸ್ಥಿತರಿದ್ದರು.

ವಿದ್ಯುತ್ ಬಿಲ್, ಪವರ್ ಕಟ್ ಇತ್ಯಾದಿ ಮಾಹಿತಿ ಬೇಕೆ, ಹಾಗಾದರೆ ಎಲ್ಲದಕ್ಕೂ ಉತ್ತರ ನೀಡಲಿದೆ ‘ನನ್ನ ಮೆಸ್ಕಾಂ’!