ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಹೆರಿಗೆ ಮತ್ತು ಸ್ತ್ರೀ ರೋಗ ಚಿಕಿತ್ಸಾ ಘಟಕದಲ್ಲಿ ಭಾನುವಾರ ರಾತ್ರಿ ಏಕಾಏಕಿ ಐಸಿಯುನಲ್ಲಿದ್ದ ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ.
VIDEO REPORT
ಬೆಂಕಿಯಿಂದಾಗಿ ಕಟ್ಟಡದ ತುಂಬ ದಟ್ಟ ಹೊಗೆ ಆವರಿಸಿಕೊಂಡಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ರಕ್ಷಣೆ ಕಾರ್ಯ ನಡೆಸಿದ್ದಾರೆ.
ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದೇ ಬೆಂಕಿಯನ್ನು ನಂದಿಸಲಾಗಿದೆ. ಆದರೆ, ದಟ್ಟ ಹೊಗೆ ಆವರಿಸಿದ್ದರಿಂದ ರೋಗಿಗಳು ಹಾಗೂ ಅವರ ಆರೈಕೆಗಾಗಿ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ.
ಮೂಲಗಳ ಪ್ರಕಾರ, ಐಸಿಯುನಲ್ಲಿ ಮೂವರು ಹಾಗೂ ಜನರಲ್ ವಾರ್ಡ್ ನಲ್ಲಿ 15-20 ರೋಗಿಗಳಿದ್ದು, ಅವರನ್ನು ಹೊರಗಡೆ ಕರೆದುಕೊಂಡು ಬರಲಾಗಿದೆ. ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.