ಕಾಂಗ್ರೆಸ್ ನವರಿಗೆ ಬುರುಡೆ ಬಿಡುವುದೊಂದೇ ಗೊತ್ತು, ಡಿವಿಎಸ್ ಲೇವಡಿ

 

 

ಸುದ್ದಿ‌ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಕಾಂಗ್ರೆಸ್ ನವರಿಗೆ ಬುರುಡೆ ಬಿಡುವುದೊಂದೇ ಗೊತ್ತು. ಹೀಗಾಗಿಯೇ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ‌ ತಾವೇ ಗೊಲ್ಲುವುದಾಗಿ ಹೇಳುತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ನಗರದ ಸ್ಚತಂತ್ರ ಉದ್ಯಾನದಲ್ಲಿ ಗುರುವಾರ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದರು.

follow us in link treeಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮಾವೇಶ ಮಾಡುತಿದ್ದು, ಎರಡೂ ಕಡೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಪ್ರತಿನಿಧಿಗಳ ಸಂಖ್ಯೆಯೇ ಅಧಿಕವಿದೆ. ಹೀಗಾದರೂ ಕಾಂಗ್ರೆಸ್ ನವರು ತಾವೇ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಅದೆಲ್ಲ ಆಧಾರ ರಹಿತ ಹೇಳಿಕೆ.‌ ರಾಜ್ಯದಲ್ಲಿ‌ 16 ಕ್ಚೇತ್ರದಲ್ಲಿ ಕಮಲ‌ ಜಯಭೇರಿ ಬಾರಿಸಲಿದೆ ಎಂದು ತಿಳಿಸಿದರು.

READ | ಲಕ್ಕಿನಕೊಪ್ಪದಲ್ಲಿ ಭೀಕರ ರಸ್ತೆ ಅಪಘಾತ, ಮುಂದೇನಾಯ್ತು?

ಒಡೆದಾಳುವುದು ಕಾಂಗ್ರೆಸ್ ತಂತ್ರ
ಈ ಮುಂಚೆಯಿಂದಲೂ ಕಾಂಗ್ರೆಸ್ ನವರು ಒಡೆದು ಆಳುತ್ತಲೇ ಬಂದಿದ್ದಾರೆ. ಈ ಚುನಾವಣೆ ವೇಳೆಯೂ ಜಾತಿ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಬಿಟ್ ಕಾಯಿನ್ ವಿಚಾರ ಚರ್ಚೆಗೆ ತಂದಿದ್ದಾರೆ. ಆದರೆ, ಇದರಿಂದ ಬಿಜೆಪಿಗೇನೂ ನಷ್ಟವಿಲ್ಲ ಎಂದು‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ಚರಪ್ಪ ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಹರತಾಳು ಹಾಲಪ್ಪ, ಆಯನೂರು ಮಂಜುನಾಥ್, ಭಾರತಿಶೆಟ್ಟಿ, ಅಶೋಕ್ ನಾಯ್ಕ್, ಮಾಡ್ಯಾಳ ವಿರೂಪಾಕ್ಷಪ್ಪ, ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ,  ಆರ್ಯವೈಶ್ಯ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಪಕ್ಷದ ವರಿಷ್ಠ ಎಂ.ಬಿ.ಭಾನುಪ್ರಕಾಶ್, ಎ.ಎನ್.ನಟರಾಜ್, ಭದ್ರಾ ಕಾಡಾ ಅಧ್ಯಕ್ಷೆ  ಪವಿತ್ರಾ ರಾಮಯ್ಯ, ಮೇಯರ್ ಸುನೀತಾ ಅಣ್ಣಪ್ಪ, ರಾಜ್ಯ ಬಿಜೆಪಿ ಪ್ರಮುಖರಾದ ಅಶ್ವತ್ಥ್ ನಾರಾಯಣ್, ವಿನಯ್ ಬಿದರೆ ಉಪಸ್ಥಿತರಿದ್ದರು.

https://www.suddikanaja.com/2021/02/09/rdpr-minister-ks-eshwarappa-furious-reaction-about-kuruba-community/

 

error: Content is protected !!