ಶಿವಮೊಗ್ಗಕ್ಕೆ‌‌ ಬರಲಿದ್ದಾರೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ಎಲ್ಲಿ ನಡೆಯಲಿದೆ ಹಾಸ್ಯ‌ ದರ್ಬಾರ್?

 

 

ಸುದ್ದಿ ಕಣಜ.ಕಾಂ‌ | DISTRICT | CULTURAL NEWS
ಶಿವಮೊಗ್ಗ: ನಗರದ ಕುವೆಂಪು ರಂಗ ಮಂದಿರದಲ್ಲಿ ನವೆಂಬರ್ 20, 21ರಂದು ‘ಹಾಸ್ಯ ದರ್ಬಾರ್’ ಸಮಾರಂಭವನ್ನು ‌ಸಿರಿಕನ್ನಡ ವಾಹಿನಿಯು ಏರ್ಪಡಿಸಿದೆ ಎಂದು ಸಂಸ್ಥಾಪಕ ನಿರ್ದೇಶಕ ಸಂಜಯ್ ಸಿಂಧೆ ತಿಳಿಸಿದರು.

follow us in link treeಎರಡು ದಿನ ಬೆಳಗ್ಗೆ 11ಕ್ಕೆ ಮತ್ತು ಸಂಜೆ 4ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಹಾಸ್ಯ ಕಲಾವಿದರಾದ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ಪ್ರೊ. ಕೃಷ್ಣೇಗೌಡ್ರು, ಎಂ.ಎಸ್. ನರಸಿಂಹಮೂರ್ತಿ, ಗುಂಡೂರಾವ್, ಸುಧಾ ಬರಗೂರು, ಸಿಹಿಕಹಿ ಚಂದ್ರು, ಮಿಮಿಕ್ರಿ ದಯಾನಂದ್, ಶಿವಮೊಗ್ಗದ ಉಮೇಶ್‌‌ ಗೌಡ ಮುಂತಾದವರು ಹಾಸ್ಯ ಚಟಾಕಿ‌‌ ಹಾರಿಸಲಿದ್ದಾರೆ.

READ | ಕಾಂಗ್ರೆಸ್ ನವರಿಗೆ ಬುರುಡೆ ಬಿಡುವುದೊಂದೇ ಗೊತ್ತು, ಡಿವಿಎಸ್ ಲೇವಡಿ

ವಾಹಿನಿಯು ಶೀಘ್ರದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ, ಪಾಂಡವಪುರ, ಅಮರ ಮಧುರ ಪ್ರೇಮ ಧಾರಾವಾಹಿಗಳು ಆರಂಭಿಸಲಿದೆ. ಈ ಧಾರಾವಾಹಿಗಳ ಕಲಾವಿದರು ಬರಲಿದ್ದಾರೆ ಎಂದು ತಿಳಿಸಿದರು.
ಕನ್ಮಡಿಗ, ಕನ್ನಡತಿ ಪ್ರಶಸ್ತಿ ಪ್ರದಾನ
ಶ್ರೇಷ್ಠ ಕನ್ನಡಿಗ ಮತ್ತು ಕನ್ನಡತಿ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಪ್ರವೇಶ ಉಚಿತವಿದೆ ಎಂದು‌ ತಿಳಿಸಿದರು.

error: Content is protected !!