JOBS IN BSNL | ಡಿಪ್ಲೋಮಾ, ತಾಂತ್ರಿಕ ಪದವೀಧರರಿಗೆ ಉದ್ಯೋಗ ಅವಕಾಶ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಡಿಪ್ಲೋಮಾ ಇನ್ ಎಂಜಿನಿಯರಿಂಗ್ ಇಲ್ಲವೇ ಕೇಂದ್ರ, ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ತಾಂತ್ರಿಕ ಕೋರ್ಸ್ ಗಳಲ್ಲಿ ಪದವಿ ಪಡೆದವರಿಗೆ ಉದ್ಯೋಗ ಅವಕಾಶವಿದೆ.
ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿ.ಎಸ್‍ಎನ್‍ಎಲ್)ನಲ್ಲಿ 22 ಅಪ್ರೆಂಟಿಸ್ ನೇಮಕ ಮಾಡಲಾಗುತ್ತಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಡಿಸೆಂಬರ್ 2ರೊಳಗೆ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

Online Application starting date 20.11.2021

Last date for enrolling in NATS portal 29.11.2021

Last date for applying BHARAT SANCHAR NIGAM LIMITED, Telangana Circle 02.12.2021

Certificate verification 08.12.2021

Handing over of selection list to BHARAT SANCHAR NIGAM LIMITED, Telangana Circle 10.12.2021

ನವೆಂಬರ್ 20ರಿಂದ NATS ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ ₹ 8,000 ಸ್ಟೈಫಂಡ್ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ

ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್‍ವಿಷಯದಲ್ಲಿ ಡಿಪ್ಲೋಮಾ, ತಾಂತ್ರಿಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಈ ಮೇಲೆಯೇ ಹೇಳಿರುವಂತೆ ಪದವಿ ಪಡೆದ ಸಂಸ್ಥೆ ರಾಜ್ಯ, ಕೇಂದ್ರದಿಂದ ಮಾನ್ಯತೆ ಪಡೆದಿರತಕ್ಕದ್ದು.
2019, 2020, 2021ನೇ ಸಾಲಿನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿರಬೇಕು. ಒಂದುವೇಳೆ, ಈ ಮುಂಚೆ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ, ಅಭ್ಯರ್ಥಿಗಳು ಇದರೆಡೆಗೆ ಗಮನಹರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಅರ್ಹರು ಅರ್ಜಿ ಸಲ್ಲಿಸುವುದು ಹೇಗೆ
ಮೇಲಿನ ಎಲ್ಲ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನ್ಯಾಟ್ಸ್ ಪೋರ್ಟಲ್ ನಲ್ಲಿ ತಮ್ಮ ಅರ್ಜಿಗಳನ್ನು ಡಿಸೆಂಬರ್ 2ರೊಳಗೆ ಸಲ್ಲಿಸತಕ್ಕದ್ದು.

NOTIFICATION

CLICK HERE TO APPLY

https://www.suddikanaja.com/2021/09/10/admission-for-technical-education/

error: Content is protected !!