ನರ್ಸಿಂಗ್, ಲೈಬ್ರರಿಯನ್, ಪದವೀಧರರಿಗೆ ಸುವರ್ಣ ಅವಕಾಶ, ಅರ್ಜಿ ಸಲ್ಲಿಸಲು ಇದನ್ನು ಓದಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 17 ಅಂತಿಮ ದಿನವಾಗಿದೆ.

ಹೀಗೆ ಅರ್ಜಿ ಸಲ್ಲಿಸಿದರೆ ತಿರಸ್ಕಾರ

ಅರ್ಜಿಯೊಂದಿಗೆ ಭಾವಚಿತ್ರ ಕಡ್ಡಾಯವಾಗಿ ಅಂಟಿಸಿ ಸಹಿ ಹಾಕಿರಬೇಕು. ಪೋಸ್ಟ್ ಕೋಡ್ ಅನ್ನು ಸರಿಯಾಗಿ ನಮೂದಿಸಿ, ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗಿದೆ ಎನ್ನುವುದನ್ನು ಬರೆದಿರಬೇಕು. ಒಬ್ಬ ಅಭ್ಯರ್ಥಿ ಒಂದೇ ಅರ್ಜಿ ಸಲ್ಲಿಸಬೇಕು. ಅಗತ್ಯ ವಿದ್ಯಾರ್ಹತೆಯ ಅಂಕಪಟ್ಟಿ ಲಗ್ಗತಿಸಿರಬೇಕು. ಹೀಗೆ ಹಲವು ಷರತ್ತುಗಳನ್ನು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಪೂರ್ಣ ಮಾಹಿತಿಗಾಗಿ ನೋಟಿಫಿಕೇಷನ್ ನೋಡಿ.

follow us in link treeಯಾವ ಹುದ್ದೆಗೆ ಯಾವ ವಿದ್ಯಾರ್ಹತೆ

  1. ಡೀಸ್- ಸ್ಪೀಚ್ ಲ್ಯಾಂಗ್ವೆಜ್ ಪ್ಯಾಥಾಲಜಿ, ಆಡಿಯೊಲಾಜಿ, ಸ್ಪೀಚ್ ಮತ್ತು ಹಿಯರಿಂಗ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕನಿಷ್ಠ ಶೇ.55 ಅಂಕದೊಂದಿಗೆ ಪಾಸಾಗಿರಬೇಕು. ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯಗಳಲ್ಲಿ ಪಿಎಚ್.ಡಿ ಪದವಿ ಪಡೆದಿರಬೇಕು. ಸೇರಿದಂತೆ ಬೋಧನಾ ಅನುಭವ ಹೊಂದಿರಬೇಕು.
  2. ನರ್ಸಿಂಗ್ ಸುಪರಿಟೆಂಡೆಂಟ್- ಎಂಎಸ್ಸಿ ನರ್ಸಿಂಗ್ ಮತ್ತು 2 ವರ್ಷದ ಅನುಭವ ಅಥವಾ ಬಿಎಸ್ಸಿ ನರ್ಸಿಂಗ್ ಪದವಿಯೊಂದಿಗೆ ಓಟಿ/ಐಸಿಯುನಲ್ಲಿ ಕಾರ್ಯನಿರ್ವಹಿಸಿದ 5 ವರ್ಷಗಳ ಅನುಭವ.
  3. ಆಡಿಯೋಲಾಜಿಸ್ಟ್/ ಸ್ಪೀಚ್ ಲ್ಯಾಂಗ್ವೆಜ್ ಪ್ಯಾಥಲಾಜಿಸ್ಟ್- ಸ್ಪೀಚ್ ಮತ್ತು ಹಿಯರಿಂಗ್ ಅಥವಾ ಸಂಬಂಧಪಟ್ಟ ವಿಷಯದಲ್ಲಿ ಬಿಎಸ್ಸಿ ಪದವಿ.
  4. ಲೈಬ್ರರಿ ಮತ್ತು ಇನ್ಫಾರ್ಮೇಷನ್ ಅಸಿಸ್ಟೆಂಟ್- ಬ್ಯಾಚಲರ್ಸ್ ಪದವಿ ಲೈಬ್ರರಿ ಸೈನ್ಸ್ ಅಥವಾ ಲೈಬ್ರರಿ ಆಂಡ್ ಇನ್ಫಾರ್ಮೇಷನ್ ಸೈನ್ಸ್ ಪದವಿಯನ್ನು ಮಾನ್ಯತೆ ಪಡೆದ ವಿವಿ, ಸಂಸ್ಥೆಯಿಂದ ಹೊಂದಿರಬೇಕು. ಜೊತೆಗೆ, ರಾಜ್ಯ, ಕೇಂದ್ರ ಸರ್ಕಾರ, ಖಾಸಗಿ, ಪಿಎಸ್.ಯು, ವಿವಿ ಇತ್ಯಾದಿಗಳಲ್ಲಿ 2 ವರ್ಷಗಳ ವೃತ್ತಿ ಅನುಭವ.
  5. ಮೆಡಿಕಲ್ ರೆಕಾಡ್ರ್ಸ್ ಟೆಕ್ನಿಷಿಯನ್ – ಮೆಡಿಕಲ್ ರೆಕಾಡ್ರ್ಸ್ ನಲ್ಲಿ ಪದವೀಧರರಾಗಿರಬೇಕು.
  6. ಅಸಿಸ್ಟೆಂಟ್ ಗ್ರೇಡ್ 2- ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಎರಡು ವರ್ಷಗಳ ಅನುಭವ, ಎಂಎಸ್ ಆಫಿಸ್, ಅಕೌಂಟಿಂಗ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.
  7. ಮಲ್ಟಿ ರಿಹ್ಯಾಬಿಟೇಷನ್ ವರ್ಕರ್- 10+2 ಶೈಕ್ಷಣಿಕ ಅರ್ಹತೆ. ಮಾನ್ಯತೆ ಪಡೆದ ಸಂಸ್ಥೆ, ಸರ್ಕಾರಿ ಆಸ್ಪತ್ರೆಯಲ್ಲಿ ಮಲ್ಟಿ ರಿಹ್ಯಾಬಿಟೇಷನ್ ನಲ್ಲಿ ಒಂದೂವರೆ ವರ್ಷದ ಸರ್ಟಿಫಿಕೇಟ್ ಕೋರ್ಸ್ ಪಡೆದಿರಬೇಕು.

CLICK HERE FOR  NOTIFICATION 

https://www.suddikanaja.com/2021/10/06/application-called-for-recruitment-in-fssai/

 

error: Content is protected !!