ರಸ್ತೆ ಪಕ್ಕದ ತಗ್ಗಿಗೆ ಖಾಸಗಿ ಬಸ್ ಪಲ್ಟಿ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ತಾಳಗುಪ್ಪ ಬಳಿಯ ಬಲೇಗಾರ್ ಕ್ರಾಸ್ ಹತ್ತಿರ ಗುರುವಾರ ಖಾಸಗಿ ಬಸ್ ಪಲ್ಟಿಯಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಭಟ್ಕಳದಿಂದ ಬೈಂದೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ರಸ್ತೆಯ ಪಕ್ಕದ ತಗ್ಗಿನಲ್ಲಿ ಪಲ್ಟಿಯಾಗಿದೆ.

ನೆರವಿಗೆ ಧಾವಿಸಿದ ಸ್ಥಳೀಯರು

ಬಸ್ ಪಲ್ಟಿಯಾಗಿದ್ದೇ ತಕ್ಷಣ ಸ್ಥಳೀಯರು ಸಾರ್ವಜನಿಕರ ಸಹಾಯಕ್ಕೆ ದೌಡಾಯಿಸಿದ್ದಾರೆ. ಗಾಯಗೊಂಡವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!