ಶಿವಮೊಗ್ಗದಲ್ಲಿ ಭಾರೀ ಮಳೆ ಸೃಷ್ಟಿಸಿದ ಆವಾಂತರ, ಗುಂಡಿಯಲ್ಲಿ ಸಿಲುಕಿದ ಕಾರು

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ನಗರದಲ್ಲಿ ಕಳೆದ ನಾಲ್ಕೂವರೆ ಗಂಟೆಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಹಲವು ಆವಾಂತರ ಸೃಷ್ಟಿಸಿದೆ.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿದ್ದು, ಗುಂಡಿಯೊಂದರಲ್ಲಿ ಕಾರು ಸಿಲುಕಿದೆ‌. ರಸ್ತೆ ಪಕ್ಕದಲ್ಲಿ ಚರಂಡಿ ಕಾಮಗಾರಿ ಮಾಡಿದ್ದು, ಮಣ್ಣನ್ನು ಮುಚ್ಚಲಾಗಿದೆ. ಆದರೆ, ಮಳೆಯಿಂದಾಗಿ ಕಾರಿನ ಭಾರಕ್ಕೆ ಮಣ್ಣು ಕುಸಿದಿದೆ. ಹೀಗಾಗಿ, ಕಾರು ಗುಂಡಿಯಲ್ಲಿ ಸಿಲುಕಿದೆ. ವಾಹನ ಹೊರಗಡೆ ತೆಗೆಯಲಾಗದೇ ಸವಾರ ಮಾಲೀಕರು ಪರದಾಡಿದರು.

FOLLOW US copy
ಆರ್.ಎಂ‌ಎಲ್ ನಗರದಲ್ಲಿ ಫೀಡರ್ ಸಮಸ್ಯೆಯಾಗಿದ್ದು, ನಗರದೆಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಂಧಿನಗರ ರಸ್ತೆಯನ್ನು ಮನಸೋಇಚ್ಛೆ ಅಗಿದ ಕಾರಣದಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಎಲ್ಲಿ ಎಷ್ಟು ಮಳೆ?

ದಕ್ಷಿಣ ಕನ್ನಡದಲ್ಲಿ 205 ಎಂಎಂ, ಉಡುಪಿಯಲ್ಲಿ 132 ಎಂಎಂ, ಶಿವಮೊಗ್ಗ 93 ಎಂಎಂ, ಹಾಸನ 80 ಎಂಎಂ, ಮೈಸೂರು 70 ಎಂಎಂ, ಕೊಡಗು 60 ಎಂಎಂ, ಚಾಮರಾಜನಗರ 60 ಎಂಎಂ

https://www.suddikanaja.com/2021/07/23/heavy-rainfall-created-flood-in-shivamogga-district/

error: Content is protected !!