ಶಿವಮೊಗ್ಗ: ಎಸಿಬಿ ದಾಳಿಯಲ್ಲಿ ಸಿಲುಕಿದ ಕೋಟಿ ಒಡೆಯ ಕೃಷಿ ಅಧಿಕಾರಿಗೆ ನ್ಯಾಯಾಂಗ ಬಂಧನ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಗದಗ ಜಂಟಿ ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರಿಗೆ ಡಿಸೆಂಬರ್ 7ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಶಿವಮೊಗ್ಗ ಒಂದನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.

VIDEO REPORT 

ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಮಾಡಿರುವ ರುದ್ರೇಶಪ್ಪ ಅವರ ಶಿವಮೊಗ್ಗದ ಮನೆಗಳ ಮೇಲೆ ಬುಧವಾರ ಏಕ ಕಾಲಕ್ಕೆ ದಾಳಿ ಮಾಡಿದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಕೋಟಿಗಟ್ಟಲೇ ಮೌಲ್ಯದ ಚಿನ್ನಾಭರಣ, ನಗದು ವಶಕ್ಕೆ ಪಡೆದಿತ್ತು. ರುದ್ರೇಶಪ್ಪ ಅವರನ್ನು ಗುರುವಾರ ಸಂಜೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶ ಮಾನು ಅವರು ಆದೇಶ ಹೊರಡಿಸಿದ್ದಾರೆ.

ಕೋಟಿಗಟ್ಟಲೇ ಆಸ್ತಿಯ ಒಡೆಯ ರುದ್ರೇಶಪ್ಪ

ಗದಗ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರ ಎರಡು ಮನೆಗಳ ಮೇಲೆ ಬುಧವಾರ ದಾಳಿ ಮಾಡಲಾಗಿದೆ. ಈ ವೇಳೆ, 4 ನಿವೇಶನ, 2 ವಾಸದ ಮನೆ, 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೇಟ್, ಆಭರಣಗಳು, 3 ಕೆಜಿ ಬೆಳ್ಳಿ ಸಾಮಗ್ರಿ, 2 ವಿವಿಧ ಕಂಪನಿಯ ಕಾರುಗಳು, 3 ದ್ವಿಚಕ್ರ ವಾಹನ, 8 ಎಕರೆ ಕೃಷಿ ಜಮೀನು, ₹ 15,94,000 ನಗದು, ₹ 20 ಲಕ್ಷ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ.
ಪೂರ್ವ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಶಿವಮೊಗ್ಗದ ಡಿವೈಎಸ್ಪಿ ಲೋಕೇಶ್, ಪಿಐ ವಸಂತ್ ಕುಮಾರ್, ಇಮ್ರಾನ್ ಬೇಗ್ ಸೇರಿದಂತೆ 44ಕ್ಕೂ ಅಧಿಕ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿದೆ.

https://www.suddikanaja.com/2021/11/24/acb-raid-on-agriculture-department-jd-at-shivamogga-got-7-5-kg-gold/

error: Content is protected !!