ಸುದ್ದಿ ಕಣಜ.ಕಾಂ | NATIONAL | SPORTS NEWS
ಬೆಂಗಳೂರು: ಟೀಂ ಇಂಡಿಯಾ ಈ ಬಾರಿಯ ಟಿ-20 ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡವಾಗಿತ್ತು. ಆದರೆ, ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ, ಕಿವೀಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಮುಂದಿನ ಹಾದಿ ಕಗ್ಗಂಟು ಮಾಡಿಕೊಂಡಿದೆ.
ಆರಂಭಿಕ ಎರಡು ಮ್ಯಾಚ್‍ಗಳಲ್ಲಿ ಪರಾಭವಗೊಂಡಿರುವ ಟೀಂ ಇಂಡಿಯಾ ಬಹುತೇಕ ಟೂರ್ನಿಯಿಂದ ಹೊರ ಬಿದ್ದಿದೆ. ಉಳಿದಿರೋದು ಬರೀ ಲೆಕ್ಕಾಚಾರ. ಹಾಗಾದರೆ, ಭಾರತ ಸೋತಿದ್ದೇಲ್ಲಿ? ಇಲ್ಲಿದೆ ಪೂರ್ಣ ವರದಿ,
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
ಕಾರಣ 1- ಅತಿಯಾದ ಕ್ರಿಕೆಟ್
ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದೆ ಇರುವುದಕ್ಕೆ ಕಾರಣ ಅತಿಯಾದ ಕ್ರಿಕೆಟ್ ಆಡುವುದು. ಬಿಸಿಸಿಐ ನಿರಂತರ ಕ್ರಿಕೆಟ್ ಸರಣಿ ಆಯೋಜಿಸುವುದರಿಂದ ತಂಡ ಆಟಗಾರರಿಗೆ ವಿಶ್ರಾಂತಿ ಇಲ್ಲದಂತಾಗಿದೆ. ಸದೃಢತೆ ಕಾಪಾಡಿಕೊಳ್ಳುವ ಸವಾಲಿನ ನಿರಂತರ ಪ್ರಯಾಣ ಮಾಡುವುದರಿಂದ ಆಟಗಾರರಿಗೆ ಅಧಿಕ ವಿಶ್ರಾಂತಿ ಅಗತ್ಯವಿದೆ. ಅದು ಆಗುತ್ತಿಲ್ಲ. ಹಣದ ಹಿಂದೆ ಬಿದ್ದಿರುವ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐ ಆಟಗಾರರನ್ನು ಜೀತಕ್ಕೆ ಪಡೆದಂತೆ ವರ್ತಿಸುತ್ತಿದೆ.
ಕಳೆದ ಆರೇಳು ತಿಂಗಳಿಂದ ಟೀಂ ಇಂಡಿಯಾ ಆಟಗಾರರು ನಿರಂತರ ಕ್ರಿಕೆಟ್ ಆಡುತ್ತಲೆ ಇದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬಳಿಕ ಐಪಿಎಲ್, ಇಂಗ್ಲೆಂಡ್ ಪ್ರವಾಸ, ಶ್ರೀಲಂಕಾ ಏಕದಿನ ಸರಣಿ, ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್, ಐಪಿಎಲ್ ಎರಡನೇ ಚರಣ ಬಳಿಕ ಟಿ-20 ವಿಶ್ವಕಪ್ ಆಟಗಾರರನ್ನು ಹೈರಾಣಾಗಿಸಿದೆ.
ಮಿಲಿಯನ್ ಡಾಲರ್ ಬೇಬಿ ಐಪಿಎಲ್ ಹಾಗೂ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಆಟಗಾರರು ಐಪಿಎಲ್ ಫ್ರಾಂಚೈಸಿಗಳಿಗೆ ಆಡುವಾಗ ಇರುವ ಒತ್ತಡ ಹಾಗೂ ಭಾವನೆಗಳು ಮತ್ತು ರಾಷ್ಟ್ರೀಯ ತಂಡದ ಪರ ಆಡುವಾಗ ಇರುವ ಒತ್ತಡ, ಭಾವನೆಗಳು ಬೇರೆ.
ಅಲ್ಲದೆ, ರಾಷ್ಟ್ರೀಯ ತಂಡ ಪ್ರತಿನಿಧಿಸುವ ಉತ್ಸಾಹವೇ ಬೇರೆ. ವಿರಾಟ್ ಪಡೆ ಇಂಗ್ಲೆಂಟ್ ವಿರುದ್ಧದ ಟೆಸ್ಟ್ ಸರಣಿ ಪೂರ್ತಿಗೊಳಿಸದೆ ಐಪಿಎಲ್ ಆಡಲು ಯುಎಇಗೆ ಬಂದಿದ್ದರು. ಐಪಿಎಲ್ ಪಂದ್ಯಗಳ ತೀವ್ರತೆ ಹಾಗೂ ಅಧಿಕ ಪಂದ್ಯಗಳು ಆಟಗಾರರನ್ನು ಬಳಲುವಂತೆ ಮಾಡಿತ್ತು. ವಿಶ್ವಕಪ್ ನಂತಹ ಪ್ರಮುಖ ಟೂರ್ನಿ ಮುಂದಿದ್ದರೂ ಆಟಗಾರರು ಹಾಗೂ ಬಿಸಿಸಿಐ ಚಿತ್ತ ಮಹತ್ವದ ಟೂರ್ನಿಗಿಂತ ಐಪಿಎಲ್ ಮೇಲಿತ್ತು. ಈ ಅಂಶ ಟಿ-20 ವಿಶ್ವಕಪ್‍ನಲ್ಲಿ ನಿರೀಕ್ಷಿತ ಮಟ್ಟ ತಲುಪದಿರಲು ಪ್ರಮುಖ ಕಾರಣ.
ಕಾರಣ 3- ಒತ್ತಡಕ್ಕೆ ನೂಕುವ ಬಯೋಬಬಲ್
ಹೆಮ್ಮಾರಿ ಕೊರೊನಾ ಬಳಿಕ ಕ್ರಿಕೆಟ್ ಆಟಗಾರರು ಸತತ ಬಯೋಬಬಲ್ ನಲ್ಲಿದ್ದು ಟೂರ್ನಿಗಳಲ್ಲಿ ಭಾಗವಹಿಸಬೇಕಿದೆ. ದೀರ್ಘ ಕಾಲದಿಂದ ಆಟಗಾರರು ಈ ಬಯೋಬಬಲ್ ನಲ್ಲಿರುವುದು ಆಟಗಾರರಿಗೆ ಒತ್ತಡ ಉಂಟು ಮಾಡುತ್ತದೆ. ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಂ ಇಂಡಿಯಾ ನಿರಂತರ ಕ್ರಿಕೆಟ್ ಆಡುತ್ತಿದೆ. ಪ್ರತಿ ಸರಣಿ ಬಯೋಬಬಲ್‍ನಲ್ಲಿಯೇ ನಡೆಯುತ್ತಿರುವ ಕಾರಣ ಆಟಗಾರರು ಒಂದಾದ ನಂತರ ಮತ್ತೊಂದು ಬಯೋಬಬಲ್‍ಗೆ ಒಳಪಡುತ್ತಿದ್ದಾರೆ. ಇದು ಆಟಗಾರರಿಗೆ ಹಿನ್ನಡೆ ಉಂಟು ಮಾಡುತ್ತದೆ. ಆಟಗಾರರು ಇಂತಹ ವಾತಾವರಣದಲ್ಲಿ ಅತಿಯಾಗಿ ಬಳಲುತ್ತಿದ್ದಾರೆ. ಆದರೆ, ಬಿಸಿಸಿಐ ತನ್ನ ಆಟಗಾರರನ್ನು ಸೂಕ್ತ ರೀತಿಯಲ್ಲಿ ಈ ಒತ್ತಡ ನಿರ್ವಹಿಸುವಂತೆ ಮಾಡಲು ವಿಫಲವಾಯಿತು.
ಟೀಂ ಇಂಡಿಯಾದ ಆಯ್ಕೆ ಮಂಡಳಿಯ ತಪ್ಪು ನಿರ್ಧಾರಗಳು ಕೂಡ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.
ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರಂತಹ ಆಟಗಾರನನ್ನು ಟೂರ್ನಿಯಿಂದ ಹೊರಗಿಡಲಾಗಿದೆ.
ಅಲ್ದೆ, ದೀಪಕ್ ಚಹರ್ ಗೆ ತಂಡದಲ್ಲಿ ಸ್ಥಾನ ನೀಡಿದ್ದರೂ ಆಡುವ ಅವಕಾಶವೇ ದೊರೆತಿಲ್ಲ. ಹಾಗಾಗಿ ಆಯ್ಕೆ ಮಂಡಳಿ ಯಡವಟ್ಟಿನಿಂದ ಭಾರತ ಹೀನಾಯ ಪರಿಸ್ಥಿತಿ ಎದುರಿಸಲು ಕಾರಣ. ಮುಂಬರುವ ಟೂರ್ನಿಗಳಲ್ಲಾದರೂ ತಪ್ಪುಗಳನ್ನು ಸರಿಪಡಿಸಿಕೊಂಡು ಟೀಂ ಇಂಡಿಯಾ ಮತ್ತೊಮ್ಮೆ ಕೀರ್ತಿ ಪತಾಕೆ ಹಾರಿಸಲಿ ಎಂಬುವುದು ಪ್ರತಿಯೊಬ್ಬ ಭಾರತೀಯರ ಆಶಯ.
ವರದಿ | ಶರಣ್ ಮುಷ್ಟೂರ್
https://www.suddikanaja.com/2021/03/17/fab-4-in-indian-cricket-team/