ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕೋಟೆಗಂಗೂರು ಗ್ರಾಮದ ಹತ್ತಿರ ಇರುವ ಶಕ್ತಿಧಾಮ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ.
ಗೋಪಾಳ ನಿವಾಸಿ ಪೃಥ್ವಿಕ್ (22) ಬಂಧಿಸಿದ್ದು ಆತನಿಂದ ಅಂದಾಜು ₹46,000 ಮೌಲ್ಯದ ಒಟ್ಟು 1 ಕೆಜಿ 638 ಗ್ರಾಂ ಒಣ ಗಾಂಜಾ, ₹750 ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
READ | ಕಸಾಯಿಖಾನೆಗೆ ಬೀಗ, ಮನೆಯಲ್ಲೇ ಗೋ ಮಾಂಸ ಮಾರಾಟ! ಪೊಲೀಸರಿಂದ ದಾಳಿ, ಸಿಕ್ಕ ಮಾಂಸವೆಷ್ಟು?
ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪಿಎಸ್.ಐ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.