ಸುದ್ದಿ ಕಣಜ.ಕಾಂ | DISTRICT | MLC ELECTION
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ ಪ್ರಯುಕ್ತ ಡಿಸೆಂಬರ್ 8ರಿಂದ 14ರ ವರೆಗೆ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಮತದಾನ ಪ್ರಯುಕ್ತ ಡಿ.8ರ ಸಂಜೆ 4 ಗಂಟೆಯಿಂದ 10ರ ಸಂಜೆ 6 ಗಂಟೆಯವರೆಗೆ ಶುಷ್ಕ ದಿನವೆಂದು ಘೋಷಿಸಲಾಗಿದೆ. ಮತ ಎಣಿಕೆಯು ಶಿವಮೊಗ್ಗ ನಗರ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿರುವುದರಿಂದ ಡಿ.13ರ ರಾತ್ರಿ ಮಧ್ಯರಾತ್ರಿ 12 ಗಂಟೆಯಿಂದ ಡಿ.14ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.