ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI) ಮಣಿಪಾಲ ಇವರ ವತಿಯಿಂದ ನಿರುದ್ಯೋಗಿ ಸ್ವ ಉದ್ಯೋಗ ಆಕಾಂಕ್ಷಿಗಳಿಗಾಗಿ ಡಿಸೆಂಬರ್ 27 ರಿಂದ 30 ದಿನಗಳ ‘ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್ (beauty parlour management)’ ಮತ್ತು ಡಿಸೆಂಬರ್ 30ರಿಂದ 30 ದಿನಗಳ ‘ಮಹಿಳೆಯರ ಟೈಲರಿಂಗ್ (tailoring training)’ ಕುರಿತು ಉಚಿತ ತರಬೇತಿಯನ್ನು ಮಣಿಪಾಲ (manipal)ದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ಸಂಬಂಧಿಸಿದ ಕ್ಷೇತ್ರದ ಬಗ್ಗೆ ಪ್ರಯೋಗಿಕವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ.
READ | KSRTC ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಇಬ್ಬರು ಅರೆಸ್ಟ್, ಕಾರಣವೇನು?
ಯಾರು ಅರ್ಜಿಗಳನ್ನು ಸಲ್ಲಿಸಬಹುದು?
ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ 18 ರಿಂದ 45ರೊಳಗಿನ ವಯೋಮಾನದ ನಿರುದ್ಯೋಗಿ ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣ ವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ಡಿಸೆಂಬರ್ 25ರೊಳಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, (CBRSETI),ಕೆನರಾ ಬ್ಯಾಂಕ್ ಪ್ರ್ರಧಾನ ಕಚೇರಿ (ಅನೆಕ್ಸ್) ಸಂಕೀರ್ಣ, ಮಣಿಪಾಲ 576104 ಇಲ್ಲಿಗೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.
ಒಬ್ಬ ಅಭ್ಯರ್ಥಿಗೆ ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ. ಆಸಕ್ತ ಕ್ಷೇತ್ರಕ್ಕೆ ಅರ್ಜಿಯನ್ನು ಕಳುಹಿಸುವುದು. ದೂರವಾಣಿ ಮುಖಾಂತರವೂ ತರಬೇತಿಗೆ ನೋದಾಯಿಸಿಕೊಳ್ಳಬಹುದು. ಗ್ರಾಮೀಣ ಪ್ರದೇಶದ ಬಿಪಿಎಲ್ (BPL) ಕುಟುಂಬದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 0820-2570455, 9449862665 ಸಂಪರ್ಕಿಸಲು ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶ, ಇದಕ್ಕಾಗಿ 16.22 ಕೋಟಿ ಮೀಸಲು