ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ವಿಧಾನ ಪರಿಷತ್ತಿನ ಮತದಾನ ಪ್ರಕ್ರಿಯೆ ಬೆಳಗ್ಗೆಯಿಂದಲೇ ಆರಂಭಗೊಂಡಿದ್ದು, ಬೆಳಗ್ಗೆ 10 ಗಂಟೆಯವರೆಗೆ ಶೇ.30.23ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಟ್ಟು 365 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 1,983 ಪುರುಷ ಹಾಗೂ 2,181 ಮಹಿಳೆಯರು ಸೇರಿ ಒಟ್ಟು 4,164 ಮತದಾರರಿದ್ದಾರೆ. ಇದರಲ್ಲಿ 93 ಅನಕ್ಷರಸ್ಥರಿದ್ದು, ಅವರಿಗೆ ಇನ್ನೊಬ್ಬರ ನೆರವಿನ ಮೂಲಕ ತಮ್ಮ ಹಕ್ಕು ಚಲಾಯಿಸುವ ಅವಕಾಶ ನೀಡಲಾಗಿದೆ.
ಕ್ಷೇತ್ರವಾರು ಮತದಾರರು
ಸೊರಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮತದಾರರು, ಶಿಕಾರಿಪುರ ಪಟ್ಟಣ ಪಂಚಾಯಿತಿ 30, ಹೊನ್ನಾಳಿ ಪುರಸಭೆ 22, ಚೆನ್ನಗಿರಿ ಪಟ್ಟಣ ಪಂಚಾಯಿತಿ 29, ಭದ್ರಾವತಿ ನಗರಸಭೆ 37, ಶಿವಮೊಗ್ಗ ಮಹಾನಗರ ಪಾಲಿಕೆ 45, ಸಾಗರ ನಗರಸಭೆ 37, ಹೊಸನಗರ ಪಟ್ಟಣ ಪಂಚಾಯತ್ 14, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ 16 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.
ಸೊರಬ ತಾಲೂಕಿನಲ್ಲಿ 304 ಗ್ರಾಮ ಪಂಚಾಯಿತಿ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಶಿಕಾರಿಪುರ 470, ಹೊನ್ನಾಳಿ 321, ನ್ಯಾಮತಿ 190, ಚನ್ನಗಿರಿ 730, ಭದ್ರಾವತಿ 431, ಶಿವಮೊಗ್ಗ 456, ಸಾಗರ 379, ಹೊಸನಗರ 294, ತೀರ್ಥಹಳ್ಳಿ ತಾಲೂಕಿನಲ್ಲಿ 335 ಗ್ರಾಪಂ ಸದಸ್ಯರು ಇದ್ದಾರೆ.
ಬಿರುಸಿನ ಮತದಾನ ನಡೆಯುತ್ತಿದ್ದು, ಬಿಗಿಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಚುನಾಯಿತ ಪ್ರತಿನಿಧಿಗಳು ಚುನಾವಣೆ ಅಧಿಕಾರಿಗಳೇ ನೀಡುವ ಪೆನ್ ನಿಂದ ಮೊದಲ ಪ್ರಶಸ್ತ್ಯದ ಮತ ಚಲಾವಣೆ ಮಾಡುತಿದ್ದಾರೆ. ತಮ್ಮ ಮತವನ್ನು ಅಭ್ಯರ್ಥಿಯ ಹೆಸರಿನ ಮುಂದೆ ಕ್ರಮಸಂಖ್ಯೆ ಬರೆದು ಚಲಾಯಿಸಲು ಅವಕಾಶವಿದೆ. ಕಣದಲ್ಲಿರುವ ಇತರ ಅಭ್ಯರ್ಥಿಗಳು ಪ್ರಾಶಸ್ತ್ಯದ ಮತ ನೀಡಬಹುದು. ಆದರೆ, ಮೊದಲ ಪ್ರಾಶಸ್ತ್ಯದ ಮತಕ್ಕೆ ಸಂಖ್ಯೆ 1 ನಂತರದ್ದಕ್ಕೆ 2 ಮತ್ತು 3 ಎಂದು ನಮೂದಿಸಬೇಕು. ಅದಕ್ಕಾಗಿ ಕನ್ನಡ, ಇಂಗ್ಲಿಷ್ ಅಥವಾ ರೋಮನ್ ಸಂಖ್ಯೆ ಬಳಸಲು ಅವಕಾಶವಿದೆ. ಪ್ರಸ್ತುತ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಗೊಂದಲಗಳಿಲ್ಲದೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ.