ಸುದ್ದಿ ಕಣಜ.ಕಾಂ | DISTRICT | FASHION SHOW
ಶಿವಮೊಗ್ಗ: ನಗರದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ಡಿಸೆಂಬರ್ 18ರಂದು ಮಹಿಳೆಯರು ಮತ್ತು ಪುರುಷರಿಗಾಗಿ ಫ್ಯಾಷನ್ ಶೋ ಹಂಟ್ ಆಡಿಷನ್ ನಡೆಯಲಿದೆ.
ಬೆಂಗಳೂರಿನ ಗ್ರೂಮಿಂಗ್ ಗುರುಕುಲ ವತಿಯಿಂದ ಡಿ.18ರಂದು ಬೆಳಗ್ಗೆ 10 ಗಂಟೆಯಿಂದ ಆಡಿಷನ್ ಆರಂಭವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ನಿರಂಜನಿ ರವೀಂದ್ರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳದಲ್ಲೇ ನೊಂದಣಿ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದು. ಈ ವೇಳೆ, ಮಿಸ್, ಮಿಸಸ್ ಮತ್ತು ಮಿಸ್ಟರ್ ಶಿವಮೊಗ್ಗ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ನೋಂದಣಿಗೆ ₹500 ಶುಲ್ಕ ನಿಗದಿ ಮಾಡಿದ್ದು, ಆಸಕ್ತರು ನಿಯಮಗಳಿಗೆ ಒಳಪಟ್ಟು ಇದರಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಮಿಸಸ್ ವಿಭಾಗದಲ್ಲಿ ಮದುವೆಯಾದವರಿಗೂ ಅವಕಾಶವಿದೆ ಎಂದರು. ಈ ಮೆಗಾ ಅಡಿಷನ್ ನಲ್ಲಿ ಆಯ್ಕೆಯಾದವರು ಜನವರಿಯಲ್ಲಿ ಶಿವಮೊಗ್ಗಲ್ಲಿಯೇ ನಡೆಯುವ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಆಡಿಷನ್ ಶೋ ಉದ್ಘಾಟನೆ
ಉದ್ಘಾಟನೆ ಸಮಾರಂಭದಲ್ಲಿ ಮಿಸ್ಟರ್ ಇಂಡಿಯಾ ಫಸ್ಟ್ ರನ್ನರ್ ಅಪ್ ಅಭಿನವ್ ವಿಶ್ವನಾಥನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಗ್ರೋಮಿಂಗ್ ಸಂಸ್ಥೆಯ ಗೀತಾಶೆಟ್ಟಿ ಮತ್ತು
ಪ್ರೀತಿರಾಜ್ ಕೂಡ ಇರುವರು. ಇದರ ಪ್ರಯೋಜನ ಪಡೆಯಲು ತಿಳಿಸಲಾಗಿದೆ. ಸಂಸ್ಥೆಯ ಸೋನಾಲಿ ನರೇಂದ್ರ, ಕ್ರಿಸ್ ಥಾಮಸ್ ಇದ್ದರು.
https://www.suddikanaja.com/2021/08/30/audition-by-hombale-production-house-in-shivamogga/