ಬೆಲ್‍ನಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಇನ್ನೆರಡು ದಿನ ಬಾಕಿ, ಆಕರ್ಷಕ ಸಂಬಳ

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited)ನಲ್ಲಿ ಪ್ರಾಜೆಕ್ಟ್ ಎಂಜಿನಿಯರ್-1 ಉದ್ಯೋಗ ಅವಕಾಶವಿದ್ದು, ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಬಿಇ/ ಬಿಟೆಕ್ ನಲ್ಲಿ ಉತ್ತೀರ್ಣರಾಗಿದ್ದು, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಸೆಂಬರ್ 26 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಮ್ಯಾನೇಜರ್ (ಎಚ್.ಆರ್./ಇಎಸ್ ಮತ್ತು ಎಸ್.ಡಬ್ಲ್ಯು), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು 560013ಗೆ ಸಲ್ಲಿಸಬಹುದಾಗಿದೆ.

ಉದ್ಯೋಗ ಸ್ಥಳ

ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ಸ್ಥಳಗಳಿಗೆ ನಿಯೋಜನೆ ಮಾಡಲಾಗುವುದು. ಅಂಡಮಾನ್ ಮತ್ತು ನಿಕೋಬಾರ್, ಲಕ್ಷದೀಪ್, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಕ್ ಮತ್ತು ಬೆಂಗಳೂರಿನಲ್ಲಿ ಹುದ್ದೆಗಳು ಖಾಲಿ ಇವೆ.
ಭರ್ತಿ ಮಾಡಿಕೊಳ್ಳಲಿರುವ ಹುದ್ದೆಗಳ ಮಾಹಿತಿ
ಪ್ರಾಜೆಕ್ಟ್ ಎಂಜಿನಿಯರ್ | ಬಿಇ, ಬಿಟೆಕ್ (ಸಿವಿಲ್) 24 ಹುದ್ದೆಗಳು ಖಾಲಿ ಇವೆ. ಬಿಇ/ ಬಿಟೆಕ್ (ಎಲೆಕ್ಟ್ರಿಕಲ್/ಇಇಇ) 6 ಹುದ್ದೆಗಳು, ಬಿಇ/ ಬಿಟೆಕ್ ಮೆಕ್ಯಾನಿಕಲ್ 6 ಹುದ್ದೆಗಳು ಖಾಲಿ ಇವೆ.
ಹುದ್ದೆಗಳಿಗೆ ಅನುಗುಣವಾಗಿ ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವ ಧನವನ್ನು ನೀಡಲಾಗುವುದು. ಮೊದಲ ವರ್ಷ ಪ್ರತಿ ತಿಂಗಳು 35,000 ರೂಪಾಯಿ, ಎರಡನೇ ವರ್ಷಕ್ಕೆ 40,000 ರೂ., ಮೂರನೇ ವರ್ಷಕ್ಕೆ 45,000 ರೂ. ಹಾಗೂ ನಾಲ್ಕನೇ ವರ್ಷಕ್ಕೆ 50,000 ರೂಪಾಯಿ ನೀಡಲಾಗುವುದು.

ವಯೋಮಿತಿ ಸಡಿಲೀಕರಣ

ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷವಿದ್ದು, ಒಬಿಸಿಗೆ 3 ವರ್ಷ ಸಡಿಲೀಕರಣವಿದ್ದರೆ, ಎಸ್‍ಸಿ, ಎಸ್‍ಟಿಗೆ 5 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

NOTIFICATION

CLICK HERE TO APPLY

WEBSITE

ಪಿಯುಸಿ ಪೂರ್ಣಗೊಳಿಸಿದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಸಲ್ಲಿಕೆಗೆ ಇನ್ನೆರಡು ದಿನವಷ್ಟೇ ಬಾಕಿ