ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ದಕ್ಷಿಣ ಭಾರತದ ಎರಡನೇ ವಿಸ್ಕಾಡೋಮ್ ರೈಲು ಶನಿವಾರ ಶಿವಮೊಗ್ಗಕ್ಕೆ ಆಗಮಿಸಿತು. ಪ್ರಯಾಣಿಕರು ಮಲೆನಾಡಿನ ಸೌಂದರ್ಯ ಸವಿಯಬೇಕು ಎಂಬ ಕಾರಣಕ್ಕೆ ಶಿವಮೊಗ್ಗ- ಯಶವಂತಪುರ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗಿದೆ.
ಮೊದಲ ದಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶವಂತಪುರದಿಂದ ಶಿವಮೊಗ್ಗಕ್ಕೆ ಏಳು ಹಾಗೂ ಶಿವಮೊಗ್ಗದಿಂದ ಯಶವಂತಪುರಕ್ಕೆ ಎಂಟು ಜನ ಪಯಣಿಸಿದರು.
READ | ಶಿವಮೊಗ್ಗ- ಯಶವಂತಪುರ ರೈಲಿಗೆ ಒಂದು ಎಸಿ ಬೋಗಿ ಜೋಡಣೆ
ಶಿವಮೊಗ್ಗಕ್ಕೆ ತಲುಪಿದ್ದೇ ಸಾರ್ವಜನಿಕರು ಬೋಗಿಯೊಳಗೆ ಪ್ರವೇಶಿಸಿ ಸೆಲ್ಫಿ ಮೊರೆ ಹೋದರು.
ವಿಸ್ಟಾಡೋಮ್ ಬೋಗಿಯಲ್ಲಿ ಒಟ್ಟು 44 ಆಸನಗಳಿದ್ದು, ವಿಶಾಲವಾದ ದ್ವಾರಗಳಿದ್ದು, ಅಟೋಮೇಷನ್ ವ್ಯವಸ್ಥೆ ಇದೆ. ಲಗೇಜ್ ಇಡಲು ಪ್ರತ್ಯೇಕ ವ್ಯವಸ್ಥೆ, ಪ್ರಕೃತಿ ಸೌಂದರ್ಯ ಸವಿಯಲು ಪೂರಕವಾದ ವಿಶಾಲ ಹಾಗೂ ಪಾರದರ್ಶಕ ಕಿಟಕಿ, ಚಾವಣಿ, ವಿಶಿಷ್ಟ ಶೌಚಾಲಯ, ಚಿಕ್ಕ ಕಿಚನ್, ವಿಶಿಷ್ಟ ಆಸನಗಳಿವೆ.