ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಅಂದರ್ ಬಾಹರ್ ಆಡುತಿದ್ದ 26 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಇಸ್ಪೀಟ್ ಕಾರ್ಡ್, 11,110 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ನ್ಯೂ ಕಾಲೋನಿಯ ವಿ.ಐ.ಎಸ್.ಎಲ್. ಎಂಪ್ಲಾಯಿಮೆಂಟ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ನಲ್ಲಿ ಇಸ್ಪೀಟ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಲಾಗಿದೆ.
ಆರೋಪಿಗಳಲ್ಲಿ ನಿವೃತ್ತ ನೌಕರರು, ಖಾಸಗಿ ಕಂಪನಿ ಉದ್ಯೋಗಿಗಳು ಇದ್ದಾರೆ. ಭದ್ರಾವತಿ ಎ.ಎಸ್.ಪಿ ಜಿತೇಂದ್ರ ಕುಮಾರ್ ನೇತೃತ್ವದಲ್ಲಿಪ್ರಭಾರ ಡಿ.ವೈ.ಎಸ್.ಪಿ ಗಜಾನನ ಸತಾರ್ ಸೇರಿದಂತೆ ಇತರರು ಕಾರ್ಯಾಚರಣೆ ಮಾಡಿದ್ದಾರೆ. ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.