ಸುದ್ದಿ ಕಣಜ.ಕಾಂ | DISTRICT | DOG SHOW
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ ನಲ್ಲಿ ಭಾನುವಾರ ಏರ್ಪಡಿಸಿದ್ದ ಡಾಗ್ ಶೋದಲ್ಲಿ ಒಂದು ಶ್ವಾನ ಎಲ್ಲರ ಗಮನ ಸೆಳೆದಿದ್ದು, ವಿಶೇಷವಾಗಿತ್ತು. ಅದರೊಂದಿಗೆ ಶ್ವಾನ ಪ್ರಿಯರು ಸೆಲ್ಫಿ ಕೂಡ ತೆಗೆಸಿಕೊಂಡರು.
ಇದಕ್ಕೆ ಕಾರಣ, `777 ಚಾರ್ಲಿ’ ಚಿತ್ರ. ಹೌದು, ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿರುವ `777 ಚಾರ್ಲಿ’ ಚಿತ್ರದಲ್ಲಿ ಮನೋಜ್ಞ ನಟನೆಯಿಂದ ಮನಸ್ಸು ಗೆದ್ದಿರುವ ಶ್ವಾನ ಕೂಡ ಡಾಗ್ ಶೋಗೆ ಬಂದಿತ್ತು. ಅದನ್ನು ವೀಕ್ಷಿಸಲು ಜನರು ಆಗಮಿಸಿದ್ದರು.
ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನೆಲ್ ಕ್ಲಬ್ ಏರ್ಪಡಿಸಿರುವ ಶ್ವಾನ ಪ್ರದರ್ಶನದಲ್ಲಿ ಇದೇ ಚಿತ್ರದಲ್ಲಿ ನಟಿಸಿರುವ ಬಾಲ ನಟಿ ಹುಬ್ಬಳ್ಳಿಯ ‘ಶಾರ್ವರಿ’ ಕೂಡ ಆಗಮಿಸಿದ್ದರು. ಅವರು ಶ್ವಾನದೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡರು.
ಡಾಗ್ ಶೋದಲ್ಲಿ 250ಕ್ಕೂ ಅಧಿಕ ಶ್ವಾನ ನೋಂದಣಿ
ಡಾಗ್ ಶೋದಲ್ಲಿ 250ಕ್ಕೂ ಅಧಿಕ ಶ್ವಾನಗಳನ್ನು ನೋಂದಣಿ ಮಾಡಿಸಲಾಗಿದೆ. ಅದರಲ್ಲಿ ದೇಶಿ ಮತ್ತು ವಿದೇಶಿ ತಳಿಗಳೂ ಇವೆ. ಜೊತೆಗೆ, ಸೈಬೇರಿಯನ್ ಹಸ್ಕಿ, ಗೋಲ್ಡನ್ ರೆಟ್ರಿವರ್, ಜರ್ಮನ್ ಶೆಫರ್ಡ್, ಮುಧೋಳ್ ಹೀಗೆ ನಾನಾ ಶ್ವಾನಗಳು ಡಾಗ್ ಶೋಗೆ ಬಂದಿವೆ.
ಶಿವಮೊಗ್ಗದಲ್ಲಿ ಡಿ.19ರಂದು ರಾಜ್ಯಮಟ್ಟದ ಡಾಗ್ ಶೋ ಜೊತೆಗೆ ರ್ಯಾಂಪ್ ವಾಕ್, ಗೆದ್ದವರಿಗೆ ಆಕರ್ಷಕ ಬಹುಮಾನ