ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶಿವಮೊಗ-ಭದ್ರಾವತಿ ರೈಲ್ವೆ ನಿಲ್ದಾಣಗಳ ನಡುವೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ.
ರೈಲ್ವೆ ಕಿ.ಮೀ ನಂ-52/100 ರಲ್ಲಿ 55 ರಿಂದ 60 ವರ್ಷದ ವೃದ್ದರೊಬ್ಬರು ಮೃತಪಟ್ಟಿದ್ದು ವಾರಸುದಾರರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಎತ್ತರ ಸುಮಾರು 5.6 ಅಡಿ, ಬೋಳು ತಲೆ, 1/2 ಇಂಚು ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ಶಿವನ ಮೂರ್ತಿಯ ಹಚ್ಚೆಯ ಗುರುತು ಇರುತ್ತದೆ, ಒಂದು ಕಡು ನೀಲಿ ಮತ್ತು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಬನಿಯನ್, ಕಡು ನೀಲಿ ಬಣ್ಣದ ಪ್ಯಾಂಟ್, ಕಾಫಿ ಬಣ್ಣದ ಅಂಡರ್ ವೇರ್, ಕಪ್ಪು ಬಣ್ಣದ ಉಡುದಾರ, ನೀಲಿ ಬಣ್ಣದ ಬೆಲ್ಟ್ ಹಾಗೂ ಪ್ಯಾರಾಗಾನ್ ಚಪ್ಪಲಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದೂರವಾಣಿ ಸಂಖ್ಯೆ 08182-222974 ಮತ್ತು ಮೊ.ನಂ 94808-02124 ಸಂಪರ್ಕಿಸಲು ತಿಳಿಸಲಾಗಿದೆ.
https://www.suddikanaja.com/2021/09/23/a-new-species-of-crabs-purple-tree-crab-sighted-in-karawara/