ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ರಾಜೇಂದ್ರನಗರದ ವೈದ್ಯ ಡಾ.ಪರಮೇಶ್ವರ್ ಅವರಿಗೆ ಸೇರಿದ ಶ್ವಾನವನ್ನು ಕಳವಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬೀಗಲ್ ತಳಿಯ ನಾಯಿಯನ್ನು ಕಳ್ಳರು ಭಾನುವಾರ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಗೇಟ್ ಒಳಗೆ ಕಟ್ಟಿದ ನಾಯಿ ಕಾಣೆಯಾಗಿದ್ದಕ್ಕೆ ವೈದ್ಯರು ಸಿಸಿ ಕ್ಯಾಮೆರಾ ದೃಶ್ಯವನ್ನು ವೀಕ್ಷಿಸಿದ್ದಾರೆ. ಆಗ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿದ್ದಾರೆ.
READ | ಶಿವಮೊಗ್ಗ ನಗರ -ಕುಂಸಿ ನಡುವೆ ರಸ್ತೆ ಸಂಚಾರ ಬಂದ್, ಪರ್ಯಾಯ ಮಾರ್ಗದ ವಿವರ ಇಲ್ಲಿದೆ
ಕಳ್ಳತನವಾದ ನಾಯಿ ಹುಡುಕಿಕೊಟ್ಟ ಖಾಕಿ
ಮಧ್ಯಾಹ್ನದ ಹೊತ್ತಲ್ಲಿ ಡಾ.ಪರಮೇಶ್ವರ್ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತಿದ್ದಾಗ ಕಳ್ಳರು ನಾಯಿಯನ್ನು ಕದ್ದು ಪರಾರಿಯಾಗಿದ್ದಾರೆ. ಆದರೆ, ಆ ದೃಶ್ಯ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.