ಶಿವಮೊಗ್ಗ ನಗರ -ಕುಂಸಿ ನಡುವೆ ರಸ್ತೆ ಸಂಚಾರ ಇಂದು ರಾತ್ರಿಯಿಂದಲೇ ಬಂದ್, ಪರ್ಯಾಯ ಮಾರ್ಗದ ವಿವರ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | DISTRICT | RAILWAY NEWS
ಶಿವಮೊಗ್ಗ: ಶಿವಮೊಗ್ಗ ನಗರ- ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.49, 50 ಮತ್ತು 79 ರ ಲೆವೆಲ್ ಕ್ರಾಸಿಂಗ್‍ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‍ಗಳನ್ನು ಮುಚ್ಚಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ.

READ | ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರು ಅರೆಸ್ಟ್

ಎಲ್‍.ಸಿ ನಂ. 50 ಡಿಸೆಂಬರ್ 6 ರ ರಾತ್ರಿ 10.30 ರಿಂದ ಡಿಸೆಂಬರ್ 7 ರ ರಾತ್ರಿ 7 ಗಂಟೆವರೆಗೆ ಎಲ್‍ಸಿ ನಂ 52 ರ ಕಾಶಿಪುರ ಮತ್ತು ಎಲ್‍ಸಿ ನಂ 49 ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಮ್ ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.
ಎಲ್‍ಸಿ ನಂ-79 ಡಿಸೆಂಬರ್ 9ರ ರಾತ್ರಿ 10.30 ರಿಂದ ಡಿಸೆಂಬರ್ 10 ರ ರಾತ್ರಿ 7 ಗಂಟೆವರೆಗೆ ಚೋರಡಿ- ಶೆಟ್ಟಿಕೊಪ್ಪ- ಸೂಡೂರು-ಐದನೇ ಮೈಲಿಗಲ್ಲು- ಆಯನೂರು ಮತ್ತು ಎಲ್‍ಸಿ 73 ರ ಮಾರ್ಗವಾದ ಬಾಲೆಕೊಪ್ಪ ಚಿಕ್ಕಮರಸ- ಕುಂಸಿ ಮುಖಾಂತರ ಸಂಚರಿಸಲು ಅವಕಾಶ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.

https://www.suddikanaja.com/2021/12/02/railway-crossing-technical-review-in-shivamogga-due-to-this-reason-traffic-blocking-and-alternation-way-for-vehicle/

error: Content is protected !!