ಸುದ್ದಿ ಕಣಜ.ಕಾಂ | KARNATAKA | RAILWAY NEWS
ಶಿವಮೊಗ್ಗ: ಜನವರಿ 3ರಿಂದ ಶಿವಮೊಗ್ಗ ಟೌನ್-ಚಿಕ್ಕಮಗಳೂರು ವಿಶೇಷ ಪ್ಯಾಸೆಂಜರ್ ರೈಲು ಮರು ಸಂಚರಿಸಲಿದೆ.
ಶಿವಮೊಗ್ಗ ಟೌನ್ ನಿಂದ ಚಿಕ್ಕಮಗಳೂರಿಗೆ ಸಂಚರಿಸುತಿದ್ದ ರೈಲನ್ನು ಬೀರೂರುವರೆಗೆ ಮಾತ್ರ ಸಂಚರಿಸುವಂತೆ ಸೂಚಿಸುವ ಮೂಲಕ ರೈಲನ್ನು ಭಾಗಶಃ ರದ್ದುಪಡಿಸಲಾಗಿತ್ತು. ಆದರೆ, ಈಗ ಮತ್ತೆ ರೈಲು ಸಂಚರಿಸಲಿದೆ.
ರೈಲು ಸಂಖ್ಯೆ 07365 ರೈಲು ಶಿವಮೊಗ್ಗದಿಂದ ಹೊರಟು ಚಿಕ್ಕಮಗಳೂರಿಗೆ ತಲುಪಲಿದೆ. ಅದೇ ರೈಲು 07366 ಜನವರಿ 4ರಿಂದ ಚಿಕ್ಕಮಗಳೂರಿನಿಂದ ಶಿವಮೊಗ್ಗ ಟೌನ್ ಗೆ ತಲುಪಲಿದೆ.
ಜನವರಿ 4ರಿಂದ ಯಶವಂತಪುರ- ಚಿಕ್ಕಮಗಳೂರು- ಯಶವಂತಪುರ (ರೈಲು ಸಂಖ್ಯೆ 07370/ 07369) ಮರು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.