ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಓದಿ

 

 

ಸುದ್ದಿ ಕಣಜ.ಕಾಂ | KARNTAKA | JOB JUNCTION
ಬೆಂಗಳೂರು: ರಾಜ್ಯ ಸರ್ಕಾರ ಅಧೀನದ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (CSG)ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅಭ್ಯರ್ಥಿಗಳ ಪಾಲಿಗೆ ಇದೊಂದು ಸುವರ್ಣ ಅವಕಾಶವಿದೆ.

ಸಿಎಸ್‍ಜಿನಲ್ಲಿ ಮಾಡಿಕೊಳ್ಳುತ್ತಿರುವ ನೇಮಕಾತಿಯ ವಿವರ
ಹುದ್ದೆ  (Post) ಸಂಖ್ಯೆ
ಪ್ರಾಜೆಕ್ಟ್‌ ಮ್ಯಾನೇಜರ್ 3
ಪ್ರಾಜೆಕ್ಟ್‌ ಲೀಡ್ 2
ಬಿಸಿನೆಸ್ ಅನಲಿಸ್ಟ್ 4
ಸೊಲ್ಯೂಷನ್ ಆರ್ಕಿಟೆಕ್ಟ್‌ 2
ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ 6
ಸಾಫ್ಟ್‌ವೇರ್ ಎಂಜಿನಿಯರ್ 42
ಡೇಟಾಬೇಸ್ ಡಿಸೈನರ್ 5
ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ 4
ಸಿಸ್ಟಮ್ ಅಡ್ಮಿನಿಸ್ಟ್ರೇಟರ್ 2
ಟೆಸ್ಟ್‌ ಲೀಡ್ 2
ಟೆಸ್ಟ್‌ ಎಂಜಿನಿಯರ್ 5
ಆಪರೇಷನ್ಸ್‌ ಮ್ಯಾನೇಜರ್ 4

ಅರ್ಜಿ ಸಲ್ಲಿಕೆಗೆ 2022ರ ಜನವರಿ 31 ಅಂತಿಮ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಕಳುಹಿಸಬಹುದು. ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಲಿಂಗ, ಅಭ್ಯರ್ಥಿಯ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಸೇವಾನುಭವ, ಈಗಿರುವ ವೇತನ ಇತ್ಯಾದಿಗಳ ಬಗ್ಗೆ ಮಾಹಿತಿಗಳನ್ನು ಒಳಗೊಂಡಿರುವ ರೆಸ್ಯೂಮ್ ಅನ್ನು ಇಮೇಲ್ careerscsg@karnataka.gov.in ಕಳುಹಿಸಿ.

READ | ಉದ್ಯೋಗ ಆಕಾಂಕ್ಷಿಗಳಿಗೆ ಶಾಕ್ ನೀಡಿದ ಭೂದಾಖಲೆಗಳ ಇಲಾಖೆ

ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ ಹೇಗೆ?
ಬಿಇ, ಬಿಟೆಕ್, ಎಂಸಿಎ, ಎಂಎಸ್‍ಸಿ, ಡಿಪ್ಲೋಮಾದಲ್ಲಿ ಉತ್ತೀರ್ಣರಾದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕ, ಸೇವಾನುಭವದ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಲಾಗುವುದು. ನಂತರ, ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

NOTIFICATION

WEBSITE

https://www.suddikanaja.com/2021/10/02/job-vacancy-in-railway-department/

error: Content is protected !!