₹10 ಕೋಳಿ ಮರಿಗೆ KSRTC ಬಸ್ ನಲ್ಲಿ ₹50 ಟಿಕೆಟ್!, ಲಗೇಜು ದರ ನಿಯಮವೇನು ಹೇಳುತ್ತೆ?

ಸುದ್ದಿ ಕಣಜ.ಕಾಂ | DISTRICT | HUMAN INTERESTING
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ (KSRTC) ಬಸ್ ನಲ್ಲಿ ₹10 ಕೋಳಿ ಮರಿಗೆ ₹50 ಟಿಕೆಟ್ ವಿಧಿಸಿರುವ ಘಟನೆ ನಡೆದಿದೆ.
ಶಿರಸಿಯಲ್ಲಿ ಅಲೆಮಾರಿ ಕುಟುಂಬವೊಂದು ಕೋಳಿ ಮರಿಯನ್ನು ₹10 ನೀಡಿ ಖರೀದಿ ಮಾಡಿದೆ. ಅದನ್ನು ಶಿರಸಿಯಿಂದ ಹೊಸನಗರಕ್ಕೆ ಖಾಸಗಿ ಬಸ್ಸಿನಲ್ಲಿ ತರಲಾಗಿದೆ. ಹೊಸನಗರದಿಂದ ಶಿರೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕೊಂಡೊಯ್ಯಲಾಗಿದೆ. ಈ ವೇಳೆ, ನಿರ್ವಾಹಕರು ಕೋಳಿ ಮರಿಗೆ ಅರ್ಧ ಟಿಕೆಟ್ ಹರಿದಿದ್ದಾರೆ‌. ಅನಿವಾರ್ಯವಾಗಿ ಕುಟುಂಬದವರು ಕೋಳಿ ಮರಿಗೆ ಖರೀದಿ ವೆಚ್ಚಕ್ಕಿಂತ ಸಂಚಾರವೇ ಅಧಿಕ ಪಾವತಿಸಬೇಕಾಗಿದೆ.

ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಲಗೇಜು ದರ

ಕರ್ನಾಟಕ ವೈಭವ, ರಾಜಹಂಸ, ಎಸಿ ರಹಿತ ಸ್ಲೀಪರ್ ಮತ್ತು ಎಲ್ಲ ರೀತಿಯ ಎಸಿ ಸಾರಿಗೆಗಳಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಸಾಗಣೆ ನಿರ್ಬಂಧ ಹೇರಲಾಗಿದೆ.
KSRTC ಬಸ್ಸಿನಲ್ಲಿ ಸಾಕು ಪ್ರಾಣಿ, ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಬಹುದು. ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳ ದರ ವಿಧಿಸಲಾಗುತ್ತದೆ.

https://www.suddikanaja.com/2021/04/03/bhanumati-birth-to-baby/