ಮನೆಯ ಟಾಯ್ಲೆಟ್ ರೂಂನಲ್ಲಿ ನಾಗರ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಜನ

 

ಸುದ್ದಿ ಕಣಜ.ಕಾಂ | CITY | SNAKE RESCUE
ಶಿವಮೊಗ್ಗ: ಮನೆಯ ಟಾಯ್ಲೆಟ್ ರೂಮಿನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ ಕೆಲಹೊತ್ತು ಮನೆಯವರ ಗಾಬರಿಗೆ ಕಾರಣವಾಗಿದೆ. ನಂತರ, ಅದನ್ನು ಸ್ನೇಕ್ ಕಿರಣ್ ಅವರು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಮಂಗಳವಾರ ಬೆಳಗ್ಗೆ ಶಿವಪ್ಪನಾಯಕ ಬಡಾವಣೆಯ ಶಬರಿ ಎನ್ನುವವರ ಮನೆಯ ಟಾಯ್ಲೆಟ್ ರೂಮಿನಲ್ಲಿ ನಾಗರ ಹಾವು ಬುಸುಗುಟ್ಟಿದೆ. ಶಬರಿ ಅವರು ಟಾಯ್ಲೆಟ್ ರೂಮಿಗೆ ಹೋದಾಗ ಹಾವಿನ ಬುಸುಗಟ್ಟುವ ಶಬ್ದ ಕೇಳಿ ಗಾಬರಿಯಿಂದ ಓಡಿ ಹೊರಗೆ ಬಂದಿದ್ದಾರೆ.

ಟಾಯ್ಲೆಟ್ ಪಿಟ್ ನಲ್ಲಿತ್ತು ನಾಲ್ಕಡಿ ನಾಗಪ್ಪ

ಮನೆಯ ಟಾಯ್ಲೆಟ್ ರೂಮಿನ ಪಿಟ್ ನಲ್ಲಿ ನಾಲ್ಕು ಅಡಿ ನಾಗರ ಹಾವು ಕಂಡುಬಂದಿದ್ದೇ ಮನೆಯವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ಅವರು ಮನೆಗೆ ಬಂದು ಅದನ್ನು ಹಿಡಿದಿದ್ದಾರೆ. ತನಂದರ ಸುರಕ್ಷಿತವಾದ ಜಾಗಕ್ಕೆ ಅದನ್ನು ಬಿಡಲಾಗಿದೆ. ಆದರೆ, ಏಕಾಏಕಿ ಹಾವು ಕಂಡು ಮನೆಯವರೆಲ್ಲ ಗಾಬರಿಯಾಗಿದ್ದಾರೆ. ಅದರಲ್ಲೂ ನಾಗರ ಹಾವು ಆಗಿದ್ದರಿಂದ ಅದನ್ನು ಹಿಡಿದು ಹೊರಗಡೆ ತಂದನಂತರ ನಮಸ್ಕರಿಸಿ ಕಳುಹಿಸಲಾಯಿತು.

INTERNATIONAL SNAKE BITE AWARENESS DAY | ಹಾವು ಕಚ್ಚಿದಾಗ ಈ ತಪ್ಪು ಮಾಡಿದರೆ ಜೀವಕ್ಕೆ ಅಪಾಯ, ಏನು ಮಾಡಬೇಕು, ಏನು ಮಾಡಬಾರದು, ವಿಶ್ವದಲ್ಲೇ ಹೆಚ್ಚು ಜನ ಸಾಯುವುದು ಭಾರತದಲ್ಲೆ, ಕಾರಣವೇನು?