ಸುದ್ದಿ ಕಣಜ.ಕಾಂ | CITY | RAILWAY CROSSING
ಶಿವಮೊಗ್ಗ: ನಗರದ ಸವಳಂಗ ರಸ್ತೆ (savalanga raod)ಯ ರೈಲ್ವೆ ಗೇಟ್ ಗೆ ರೈಲ್ವೆ ಓವರ್ ಬ್ರಿಡ್ಜ್ (ROB) ಕಾಮಗಾರಿ ಜನವರಿ 5ರಿಂದ ನಡೆಯುತ್ತಿದೆ. ಸುಗಮ ಸಂಚಾರ ದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ.
ಪರ್ಯಾಯ ಮಾರ್ಗಗಳ ಮಾಹಿತಿ
- ಶಿವಮೊಗ್ಗದಿಂದ ಸವಳಂಗದ ಕಡೆ ಸಂಚರಿಸುವ ವಾಹನಗಳು ಶಿವಮೊಗ್ಗ ಬಸ್ ಸ್ಟ್ಯಾಂಡ್ ನಿಂದ ಸಾಗರ ರಸ್ತೆ ಆಲ್ಕೊಳ ಸರ್ಕಲ್, ಪೊಲೀಸ್ ಚೌಕಿ, ಮೇದಾರ್ ಕೇರಿ, ಬೊಮ್ಮನಕಟ್ಟೆ ರೈಲ್ವೆ ಗೇಟ್, ಬಸವನಗಂಗೂರು, ಹುಣಸೋಡು, ಅಬ್ಬಲಗೆರೆ ಎಡಕ್ಕೆ ತಿರುಗಿ ಸವಳಂಗ ರಸ್ತೆಗೆ ಸೇರುವುದು.
- ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ಬರುವ ಲಘು, ಇತರೆ ವಾಹನಗಳು ನವುಲೆ ಗಣಪತಿ ದೇವಸ್ಥಾನದ ಎಡಕ್ಕೆ ತಿರುಗಿ ತ್ರಿಮೂರ್ತಿ ನಗರ, ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲೆ ಮಲ್ಲಿಕಾರ್ಜುನ ನಗರ, ನೆಕ್ಸಾ ಶೋರೂಂ ಹತ್ತಿರ ಬಲಗಡೆ, ಹೊನ್ನಾಳಿ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ಶಂಕರಮಠ ಸರ್ಕಲ್ ಮುಖಾಂತರ ಸಂಚರಿಸತಕ್ಕದ್ದು.
- ಶಿವಮೊಗ್ಗದಿಂದ ಸವಳಂಗ ಕಡೆಗೆ ಹೊರಹೋಗುವ ಲಘು ವಾಹನಗಳು ಶಿವಮೊಗ್ಗ ಬಸ್ ಸ್ಟ್ಯಾಂಡ್, ಉಷಾ ನರ್ಸಿಂಗ್ ಹೋಂ ಕಡೆಯಿಂದ ಬರುವ ವಾಹನಗಳು ರಾಜ್ಕುಮಾರ್ ಸರ್ಕಲ್ (ಮೇದಾರಕೇರಿ), ಬೊಮ್ಮನಕಟ್ಟೆ ರೈಲ್ವೆ ಗೇಟ್ ಬಲಗಡೆಯಿಂದ ಕೀರ್ತಿನಗರ, ಅಶ್ವಥ್ ನಗರ, ಎಲ್.ಬಿ.ಎಸ್. ನಗರ ಎರಡನೇ ಕ್ರಾಸ್ ಮೂಲಕ ಸವಳಂಗ ರಸ್ತೆ ಸೇರುವುದು.
- ಸವಳಂಗ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳು ನವುಲೆ ಗಣಪತಿ ದೇವಸ್ಥಾನದಿಂದ ತ್ರಿಮೂರ್ತಿನಗರ, ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲೆ ಮಲ್ಲಿಕಾರ್ಜುನ ನಗರ, ನೆಕ್ಸಾ ಶೋರೂಂ ಹತ್ತಿರ ಬಲಗಡೆ, ಹೊನ್ನಾಳಿ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ಶಂಕರಮಠ ಸರ್ಕಲ್ ಮುಖಾಂತರ ಚಲಿಸುವುದು.
- ಶಿವಮೊಗ್ಗದಿಂದ ಸವಳಂಗ ಕಡೆಗೆ ಹೊರಹೋಗುವ ಲಾರಿ ಮತ್ತು ಭಾರಿ ವಾಹನಗಳು ಶಿವಮೊಗ್ಗ ಬಸ್ ಸ್ಟ್ಯಾಂಡ್, ಆಲ್ಕೊಳ ಸರ್ಕಲ್, ಆಯನೂರು, ಹಾರ್ನಳ್ಳಿ, ಸವಳಂಗ ಮಾರ್ಗ. ಎಂ.ಆರ್.ಎಸ್ ಸರ್ಕಲ್, ಸಂದೇಶ್ ಮೋಟಾರ್ಸ್ ಸರ್ಕಲ್, ಗೋಪಾಳ, ಆಲ್ಕೋಳ ಸರ್ಕಲ್, ಆಯನೂರು, ಹಾರ್ನಳ್ಳಿ, ಸವಳಂಗ ಸೇರುವುದು.
- ಸವಳಂಗದಿಂದ ಶಿವಮೊಗ್ಗ ಕಡೆಗೆ ಬರುವ ಲಾರಿ ಮತ್ತು ಭಾರಿ ವಾಹನಗಳು ಸವಳಂಗ, ಹಾರ್ನಳ್ಳಿ, ಆಯನೂರು, ಆಲ್ಕೊಳ ಸರ್ಕಲ್, ಗೋಪಾಳ, ಸಂದೇಶ ಮೋಟಾರ್ಸ್ ಸರ್ಕಲ್ ಕಡೆಗೆ ಸಂಚರಿಸಲು ಅವಕಾಶ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
https://www.suddikanaja.com/2021/12/07/heavy-traffic-jam-in-usha-nursing-road-due-to-level-crossing-work-at-lc-no-50/