ಶಿವಮೊಗ್ಗ ಮತ್ತೆ ವೀಕೆಂಡ್ ಲಾಕ್, ಕೋವಿಡ್ ಟಫ್ ರೂಲ್ಸ್, ಏನಿರುತ್ತೆ, ಏನಿರಲ್ಲ?

ಸುದ್ದಿ ಕಣಜ.ಕಾಂ | DISTRICT | COVID GUIDELINES
ಶಿವಮೊಗ್ಗ: ಕೋವಿಡ್ ಸೋಂಕು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಖಡಕ್ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ‌ ಮುಖ್ಯಮಂತ್ರಿಗಳು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಹಲವು ಅಂಶಗಳು ಶಿವಮೊಗ್ಗಕ್ಕೂ ಅನ್ವಯ ಆಗಲಿವೆ.

READ | ಓಮಿಕ್ರಾನ್ ಕಂಟ್ರೋಲ್‍ಗೆ ಟಫ್ ರೂಲ್ಸ್, ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ , ಬೆಂಗಳೂರಿಗೆ ಪ್ರತ್ಯೇಕ ಗೈಡ್‍ಲೈನ್ಸ್, ಯಾವುದಕ್ಕೆಲ್ಲ ನಿರ್ಬಂಧ

ಶಿವಮೊಗ್ಗದಲ್ಲಿ ಮುಂದುವರಿಯಲಿದೆ ನೈಟ್ ಕರ್ಫ್ಯೂ
ಡಿಸೆಂಬರ್ 28 ರಿಂದ ಜನವರಿ 7ರ ವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿತ್ತು. ಅದು ಮುಂದುವರಿಯಲಿದ್ದು, ಜ.19ರ ವರೆಗೆ ಕಠಿಣ ನಿಯಮ ಗಳು ಜಾರಿಯಲ್ಲಿರಲಿವೆ.

ಹೊಸ ರೂಲ್ಸ್ ಪ್ರಕಾರ ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂಗಳಂದು ಎನಿರುತ್ತೆ, ಏನಿರಲ್ಲ?

  1. ವೀಕೆಂಡ್ ಕರ್ಫ್ಯೂ ಇರಲಿದ್ದು, ಸರ್ಕಾರದ ಸೂಚನೆಯ ಪ್ರಕಾರ ಎಲ್ಲ ಸರ್ಕಾರಿ ಕಚೇರಿಗಳು ವಾರದ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿವೆ. (ಅಗತ್ಯ ಸೇವೆಗಳ ಹೊರತುಪಡಿಸಿ)
  2. ಎಲ್ಲ ಸಾರ್ವಜನಿಕ ಉದ್ಯಾನಗಳು ಬಂದ್ ಇರಲಿವೆ. ಕಾರ್ಖಾನೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿದ್ದು, ನೌಕರರು ಕಡ್ಡಾಯವಾಗಿ ಐಡಿ ಕಾರ್ಡ್ ಜೊತೆಯಲ್ಲಿ ಕೊಂಡೊಯ್ಯಬೇಕು.
  3. ರೋಗಿಗಳು, ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಅವರೊಂದಿಗೆ ಸಂಬಂಧಿಕರು, ಲಸಿಕೆ ಪಡೆಯುವವರು ಸಂಚಾರಕ್ಕೆ ಅವಕಾಶವಿದೆ. ಕೋವಿಡ್ ಲಸಿಕೆ ಪಡೆಯುವುದಕ್ಕೂ ತೆರಳಬಹುದು. ಯಾವ ಕಾರಣಕ್ಕೂ ಅನಗತ್ಯವಾಗಿ ಓಡಾಡುವಂತಿಲ್ಲ.
  4. ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್, ಬೀದಿ ವ್ಯಾಪಾರ ಅವಕಾಶ, ಹೋಮ್ ಡಿಲಿವರಿಯೂ ಅಬಾಧಿತ. ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗಳಿಗೆ ಅವಕಾಶವಿದೆ.

ಒಂದೂವರೆ ತಿಂಗಳ ಹಿಂದೆ ಮೃತಪಟ್ಟಿದ್ದ ಆನೆಯ ಕಳೆಬರ ಮುತ್ತೂಡಿನಲ್ಲಿ ಪತ್ತೆ, ಕಾರಣ ನಿಗೂಢ