ಇಂದು ರಾತ್ರಿಯಿಂದಲೇ ಶಿವಮೊಗ್ಗ ಲಾಕ್, ಎರಡು ದಿನ ಏನಿರುತ್ತೆ, ಏನಿರಲ್ಲ?

ಸುದ್ದಿ ಕಣಜ.ಕಾಂ | DISTRICT | WEEKEND CURFEW
ಶಿವಮೊಗ್ಗ: ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5ರ ವರೆಗೆ ಶಿವಮೊಗ್ಗ ಸ್ತಬ್ದವಾಗಿರಲಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವೀಕೆಂಡ್ ಕಫ್ರ್ಯೂ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.

ಇವುಗಳು ಇರಲಿವೆ
 • ಜಿಲ್ಲೆಯಾದ್ಯಂತ ತುರ್ತು, ಅತ್ಯಾವಶ್ಯಕ ಸೇವೆಗಳು ಲಭ್ಯ ಇರಲಿವೆ.
 • ಕನಿಷ್ಠ ಪುರಾವೆಗಳೊಂದಿಗೆ ರೋಗಿಗಳು ಮತ್ತು ಅವರ ಪರಿಚಾರಕರು, ತುರ್ತು ಅಗತ್ಯತೆಯ ಅವಶ್ಯಕತೆ ಇರುವ ವ್ಯಕ್ತಿಗಳು, ಲಸಿಕೆಯನ್ನು ತೆಗೆದುಕೊಳ್ಳಲು ಹೋಗುವವರು ಸಂಚರಿಸಬಹುದು.
 • ಆಹಾರ, ದಿನಸಿ, ಹಣ್ಣುಗಳು, ತರಕಾರಿಗಳು, ಮಾಂಸ, ಮೀನು, ಹಾಲಿನ ಬೂತ್, ಪ್ರಾಣಿಗಳಿಗೆ ಅವಶ್ಯವಿರುವ ಮೇವುಗಳನ್ನು ಪೂರೈಕೆಗೆ ವ್ಯವಹರಿಸುವ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ಇದೆ.
 • ಬೀದಿ ಬದಿ ವ್ಯಾಪಾರಿಗಳಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳು ಕಾರ್ಯನಿರ್ವಹಿಸಲಿವೆ.
 • ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ತಿನಿಸುಗಳನ್ನು ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿಗೆ ಅವಕಾಶವಿದೆ.
 • ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು, ಟ್ಯಾಕ್ಸಿಗಳ ಚಲನೆಯನ್ನು ರೈಲು ನಿಲ್ದಾಣ, ಬಸ್ ಟರ್ಮಿನಲ್, ನಿಲ್ದಾಣಗಳಿಗೆ ಸಂಚರಿಸಲು ಅವಕಾಶವಿದೆ.
 • ಪ್ರಯಾಣಿಕರು ಸಹ ಪ್ರಯಾಣದ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.

ಏನಿರಲ್ಲ

 • ಸಾರ್ವಜನಿಕ ಉದ್ಯಾನಗಳು ಬಂದ್ ಇರಲಿವೆ.
 • ಅಗತ್ಯ ಸೇವೆಯ ಹೊರತಾಗಿರುವ ಅಂಗಡಿ, ಮುಂಗಟ್ಟುಗಳು ಕ್ಲೋಸ್
 • ವೀಕೆಂಡ್ ಕಫ್ರ್ಯೂ ವೇಳೆ ಮದ್ಯ ಮಾರಾಟಕ್ಕೂ ಅವಕಾಶವಿರುವುದಿಲ್ಲ. ಶುಕ್ರವಾರ ರಾತ್ರಿ 8 ಗಂಟೆಯಿಂದಲೇ ಮದ್ಯದಂಗಡಿ ಬಂದ್ ಆಗಲಿವೆ.
 • ಕಂಟೈನ್ಮೆಂಟ್ ಜೋನ್ ಗಳಲ್ಲಿ ಬಸ್ ಸಂಚಾರ ಇರುವುದಿಲ್ಲ.
 • ಗ್ರಂಥಾಲಯ, ಶಿವಮೊಗ್ಗ ಮೃಗಾಲಯ

ನೈಟ್ ಕರ್ಫ್ಯೂ ಹಿಂಪಡೆದ ಸರ್ಕಾರ, ಕಾರಣವೇನು ಗೊತ್ತಾ?