ಶಿವಮೊಗ್ಗ ದಲ್ಲಿ ಮತ್ತೆ ನೂರರ ಗಡಿ ದಾಟಿದ ಕೊರೊನಾ ಸೋಂಕು, ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕು ಮತ್ತೆ ಉಲ್ಬಣಿಸಿದೆ. ಸೋಮವಾರ ಹೊಸದಾಗಿ 112 ಪ್ರಕರಣಗಳು ದೃಢಪಟ್ಟಿವೆ.
ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರನ್ನು ಐಸೋಲೇಟ್ ಮಾಡಲಾಗಿದ್ದು, ಚಿಕಿತ್ಸೆ ಪಡೆದು ಎಂಟು ಜನ ಗುಣಮುಖರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು 44, ಭದ್ರಾವತಿಯಲ್ಲಿ 39 ಪ್ರಕರಣಗಳು ದೃಢಪಟ್ಟಿವೆ. ತೀರ್ಥಹಳ್ಳಿಯಲ್ಲಿ 3, ಶಿಕಾರಿಪುರದಲ್ಲಿ 3, ಸಾಗರದಲ್ಲಿ 17, ಸೊರಬದಲ್ಲಿ 3, ಬಾಹ್ಯ ಜಿಲ್ಲೆಯ ಮೂವರಲ್ಲಿ ಕೊರೊನಾ ವೈರಾಣುವಿನ ಸೋಂಕು ಪತ್ತೆಯಾಗಿದೆ. ಇದರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ 19 ಪ್ರಕರಣಗಳಿವೆ.
* ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳ
ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ 54, ಡಿಸಿಎಚ್.ಸಿಯಲ್ಲಿ 14, ಖಾಸಗಿ ಆಸ್ಪತ್ರೆಯಲ್ಲಿ 28 ಹಾಗೂ ಮನೆ ಆರೈಕೆಯಲ್ಲಿ 358 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಜನ ಟ್ರಿಯೇಜ್ ನಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 465ಕ್ಕೆ ಏರಿಕೆ ಕಂಡಿದೆ. ಇಂದು 2,963 ಜನರ ಮಾದರಿ ಸಂಗ್ರಹಿಸಲಾಗಿದೆ. 1,371 ನೆಗೆಟಿವ್ ಬಂದಿವೆ.

ಶಿವಮೊಗ್ಗದಲ್ಲಿ ಇಂದು ಕೊರೊನಾ ಮಹಾಸ್ಫೋಟ, ಮತ್ತೆ ನೂರರ ಗಡಿ ದಾಟಿದ ಕೇಸ್

https://www.highperformancegate.com/cdeyj4mni3?key=f95ce548ba397001c5150fe03b415e4a